Friday, May 17, 2024

ಕಾಶ್ಮೀರದಲ್ಲಿ ಭಯೋತ್ಪಾದಕ ಅಲ್ ಕೈದಾ ಅಂಗಸಂಸ್ಥೆ!

ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ಭಯೋತ್ಪಾದನೆ ಹರಡುವ ಉದ್ದೇಶದಿಂದ ಭಯೋತ್ಪಾದಕ ಗುಂಪು ಅಲ್ ಕೈದಾ ತನ್ನ ಕಾರ್ಯಾಚರಣೆಗಾಗಿ ಪ್ರಾದೇಶಿಕ ಅಂಗಸಂಸ್ಥೆಯನ್ನು ರೂಪಿಸುತ್ತಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ಇದನ್ನೂ ಓದಿ: ನಾಳೆ ಮಣಿಪುರಕ್ಕೆ “ಇಂಡಿಯಾ” ಸಂಸದರ ಭೇಟಿ

ಅಫ್ಘಾನಿಸ್ತಾನದಲ್ಲಿ ಅಲ್-ಕೈದಾ ಸಕ್ರಿಯವಾಗಿದೆ. 400ಕ್ಕೂ ಹೆಚ್ಚು ಉಗ್ರರು, 2,000ಕ್ಕೂ ಹೆಚ್ಚು ಬೆಂಬಲಿಗರು ಇದ್ದಾರೆ ಎಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿ ಅಲ್-ಕೈದಾ ಸುಮಾರು 200 ಉಗ್ರರನ್ನು ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ತಾಲಿಬಾನ್ ಜತೆ ಅಲ್-ಕೈದಾ ನಿಕಟ ಉನ್ನತ ಅಧಿಕಾರಿಗಳ ಅಡಿಯಲ್ಲಿ ಅಲ್-ಕೈದಾ ಸದಸ್ಯರು ಕೆಲಸ ಮಾಡುತ್ತಿದ್ದಾರೆ.

ದೇಶಾದ್ಯಂತ ನೆಲೆ ಭದ್ರ ಪಡಿಸುತ್ತಿದ್ದಾರೆ. ಆದರೆ, ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿ ಮಾಡುವ ಸಾಮರ್ಥ್ಯ ಅದರ ಬಳಿ ಇಲ್ಲ. ಹೊಸ ಹೋರಾಟಗಾರರನ್ನು ಸಜ್ಜುಗೊಳಿಸಲು ಮತ್ತು ನೇಮಕ ಮಾಡಿಕೊಳ್ಳಲು ಅಫ್ಘಾನಿಸ್ತಾನ ಕೇಂದ್ರ ಬಿಂದುವಾಗಿದೆ ಎಂದು ವರದಿ ಉಲ್ಲೇಖಿಸಿದೆ.

RELATED ARTICLES

Related Articles

TRENDING ARTICLES