Wednesday, January 22, 2025

ಟಿ.ಜೆ ಅಬ್ರಹಾಂಗೆ ‘ಪವರ್’ ಪಂಚ ಪ್ರಶ್ನೆ : FIR ದಾಖಲಾದ ಬೆನ್ನಲ್ಲೇ ‘ಡೀಲ್ ರಾಜ’ ವಿಲವಿಲ!

ಬೆಂಗಳೂರು : ಟಿ.ಜೆ ಅಬ್ರಹಾಂ..! ಸಾಮಾಜಿಕ ಹೋರಾಟಗಾರನೆಂಬ ಮುಖವಾಡ ಧರಿಸಿದ್ದ ಡೀಲ್ ಮಾಸ್ಟರ್​. ಕೆಎಎಸ್​ ಅಧಿಕಾರಿ ಡಾ. ಸುಧಾಗೆ 100 ಕೋಟಿ ಡಿಮ್ಯಾಂಡ್ ಮಾಡಿ 25 ಲಕ್ಷ ಜೇಬಿಗಿಳಿಸುವಾಗ ಪವರ್ ಟಿವಿ ಕಾಮೆರಾದಲ್ಲಿ ಸಿಕ್ಕಿ ಬಿದ್ದಿದ್ದ. ಈ ಬಗ್ಗೆ ಎಫ್​ಐಆರ್​ ದಾಖಲಾಗ್ತಿದ್ದಂತೆ ಗೋಸುಂಬೆ ನಾಯಕ ಎಸ್ಕೇಪ್ ಆಗಿದ್ದಾನೆ.

ಸೋಗಲಾಡಿ ಹೋರಾಟಗಾರ ಟಿ.ಜೆ.ಅಬ್ರಹಾಂ ಡೀಲ್‌ ಪುರಾಣವನ್ನು ಪವರ್ ಟಿವಿ ರೆಡ್‌ ಹ್ಯಾಂಡ್ ಆಗಿ ಬಯಲು ಮಾಡಿತ್ತು. ಈ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಡೀಲ್ ರಾಜ ಅಬ್ರಹಾಂ ಸುಳಿವೇ ಇಲ್ಲದಂತೆ ಕಾಲ್ಕಿತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಯಾವುದೇ ಕ್ಷಣದಲ್ಲಿ ಅಬ್ರಹಾಂ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.

ಟಿ.ಜೆ ಅಬ್ರಹಾಂಗೆ ‘ಪವರ್’ ಪಂಚ ಪ್ರಶ್ನೆ

  • ನೀವು ತಪ್ಪೇ ಮಾಡಿಲ್ಲ ಅಂದ್ರೆ ಪರಾರಿಯಾಗಿದ್ದೇಕೆ?
  • ಸಾಚಾ ಆಗಿದ್ರೆ ಜಾಮೀನು ಪಡೆಯಲು ಓಡಾಟ ಯಾಕೆ?
  • ಪೊಲೀಸರ ತನಿಖೆ ಎದುರಿಸಲು ಹಿಂದೇಟು ಯಾಕೆ?
  • ಸುದ್ದಿಗೋಷ್ಠಿ ಮಾಡಿ ಸ್ಪಷ್ಟನೆ ಕೊಡಲು ಏನು ಪ್ರಾಬ್ಲಂ?
  • ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದೀರಾ?

ಎಂಬ ಪಂಚ ಪ್ರಶ್ನೆಗಳನ್ನು ಟಿ.ಜೆ ಅಬ್ರಹಾಂಗೆ ‘ಪವರ್’ ಟಿವಿ ಕೇಳುತ್ತಿದೆ.

ಕೆಎಎಸ್ ಅಧಿಕಾರಿ ಡಾ. ಸುಧಾ ಅವರ ದೂರು ಆಧರಿಸಿ ಅಬ್ರಹಾಂ ವಿರುದ್ಧ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್‌ 384, 509,34ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸರು ಯಾವುದೇ ಕ್ಷಣದಲ್ಲಾದರೂ ವಂಚಕನಿಗೆ ಬಲೆ ಬೀಸಿದ್ದಾರೆ. ಹಾಗಾಗಿ, ಕೆಎಎಸ್ ಅಧಿಕಾರಿ ಡಾ.ಸುಧಾಗೆ ಲಂಚಕ್ಕೆ ಟಾರ್ಚರ್‌ ಕೊಟ್ಟಿದ್ದ ಅಬ್ರಹಾಂ ಬಂಧನ ಭೀತಿಯಲ್ಲಿದ್ದಾನೆ.

ಮಾತನಾಡೋ ತಾಕತ್ ಇಲ್ವಾ?

ಬೇರೆಯವರನ್ನು ಪ್ರಶ್ನೆ ಮಾಡುವ ಆಸಾಮಿ ಈಗ ಯಾಕೆ ಸೈಲೆಂಟ್? ಕಾನೂನಿನ ಪಾಠ ಮಾಡುವ ಬೃಹಸ್ಪತಿ ಈಗ ಮಾಡ್ತಿರೋದೇನು? ತಪ್ಪು ಮಾಡದಿದ್ರೆ ಯಾಕೆ ಓಡೋಗ್ತಾ ಇದ್ರು ಎಂದು ಅಂದು ಡೈಲಾಗ್ ಹೊಡೆದಿದ್ದ ಭೂಪ ಈಗ ಕಾಣೆಯಾಗಿರೋದು ಯಾಕೆ? ನಿಮ್ಮ ಮೇಲಿನ ಆರೋಪಕ್ಕೆ ಉತ್ತರ ಯಾವಾಗ? ಅಂದು ಮಾತನಾಡಿದ ದಾಟಿಯಲ್ಲೇ ಮಾತನಾಡೋ ತಾಕತ್ ಇದ್ಯಾ? ನಾಡಿನ ಜನರ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಇದ್ಯಾ? ಎಂದು ಪವರ್ ಟಿವಿ ಸೋಗಲಾಡಿ ಹೋರಾಟಗಾರನನ್ನು ಪ್ರಶ್ನಿಸುತ್ತಿದೆ.

ಒಟ್ಟಾರೆ, ಸಾಕ್ಷ್ಯ ಸಮೇತ ಬೃಹತ್ ನಾಟಕ ಪಾತ್ರಧಾರಿ ನಕಲಿ ಹೋರಾಟಗಾರ ಅಬ್ರಹಾಂನ ಬೆತ್ತಲು ಮಾಡಿದ್ದ ಪವರ್ ಟಿವಿಗೆ ಜನರಿಂದ ಪ್ರಶಂಸೆಗಳ ಸುರಿಮಳೆ ಬರುತ್ತಿದೆ.

RELATED ARTICLES

Related Articles

TRENDING ARTICLES