Monday, December 23, 2024

ರಸ್ತೆಗಿಳಿದ ಅತ್ಯಾಧುನಿಕ BMTC ಸ್ಮಾರ್ಟ್ ಎಲೆಕ್ಟ್ರಿಕ್ ಬಸ್! : ಇದರ ವಿಶೇಷತೆಗಳೇನು?

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನ ಸಾರ್ವಜನಿಕರ ಪ್ರತಿದಿನ ಒಡನಾಡಿ ಬಿಎಂಟಿಸಿಗೆ ಮತ್ತಷ್ಟು ಎಲೆಕ್ಟ್ರಾನಿಕ್ ಬಸ್​ಗಳು ಆಗಮಿಸಲಿವೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಟಾಟಾ ಕಂಪನಿಯ ಹೊಸ ಎಲೆಕ್ಟ್ರಿಕ್ ಬಸ್​ಗಳಿಗೆ ಚಾಲನೆ ನೀಡಿದ್ದಾರೆ.

ಶಾಂತಿನಗರದಿಂದ ವಿಧಾನಸೌಧದವರೆಗೆ ಸಚಿವರು ಹಾಗೂ ಅಧಿಕಾರಿಗಳು ಪ್ರಯಾಣ ಬೆಳೆಸಿದರು. ಈ ಮೂಲಕ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬಸ್​ನ ಪ್ರಥಮ ಪ್ರೊಟೊಟೈಪ್ ಬಸ್​ಗಳನ್ನು ಲೋಕಾರ್ಪಣೆ ಮಾಡಲಾಯಿತು.

ಫೇಮ್-2 ಯೋಜನೆಯಡಿ 921 ಬಸ್ಸುಗಳು ಇನ್ನೂ ಮೂರು ತಿಂಗಳಿನಲ್ಲಿ ರೋಡಿಗಿಳಿಯಲಿವೆ. ಇಲ್ಲಿಯವರೆಗೆ 390 ಎಲೆಕ್ಟ್ರಿಕ್ ಬಸ್​ಗಳು ಬಿಎಂಟಿಸಿಯಲ್ಲಿ ಸೇವೆ ಸಲ್ಲಿಸುತ್ತಿವೆ. ಇದೀಗ 921 ಟಾಟಾ ಕಂಪನಿ ಇವಿ ಬಸ್ ಆಗಮಿಸಲಿದೆ. ಈ ಮೂಲಕ ಬಸ್ ವ್ಯವಸ್ಥೆಯನ್ನ ಸರಿದೂಗಿಸಲು ಮತ್ತು ಮಾಲಿನ್ಯಮುಕ್ತ ಬೆಂಗಳೂರು ಮಾಡಲು ಬಿಎಂಟಿಸಿ ದಿಟ್ಟ ಹೆಜ್ಜೆ ಇಟ್ಟಿದೆ.

ಟಾಟಾ ಇವಿ ಬಸ್ ವಿಶೇಷತೆಗಳು

  • ಪರಿಸರ ಸ್ನೇಹಿ, ಅಂಗವಿಕಲರು, ಹಿರಿಯ ನಾಗರಿಕರಿಗೆ ಅನುಕೂಲ
  • ಬಸ್ ಹತ್ತಲು ಅನುಕೂಲಕಾರಿಯಾದ ಲೋ ಫ್ಲೋರ್ ವ್ಯವಸ್ಥೆ
  • 12 ಮೀಟರ್ ಉದ್ದವಿರುವ ಬಸ್, ಹಾಗೇಯೇ 35 ಆಸನದ ವ್ಯವಸ್ಥೆ
  • ಬಸ್​ನ ನಾಲ್ಕು ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ
  • ಒಂದು ಬಾರಿ ಚಾರ್ಜ್ ಮಾಡಿದ್ರೆ 200 ಕಿಲೋ ಮೀಟರ್ ಸಂಚಾರ
  • ಡ್ರೈವರ್ ಎಕ್ಸ್​ಲೇಟರ್ ಒತ್ತದಿದ್ದರೆ ಆಟೋಮೆಟಿಕ್ ಚಾರ್ಜಿಂಗ್
  • ಮೆಜೆಸ್ಟಿಕ್ ಟು ರಾಜಾಜಿನಗರಕ್ಕೆ 1 ವಾರ ಟ್ರಯಲ್ ರನ್
  • ಟ್ರಯಲ್​ ರನ್ ನಂತರ ಮೂರು ತಿಂಗಳಿನಲ್ಲಿ 921 ಇವಿ ಬಸ್ ಸೇವೆ

ನಾಲ್ಕು ಕಡೆ ಸಿಸಿಟಿವಿ ಅಳವಡಿಕೆ

ಪರಿಸರ ಸ್ನೇಹಿ, ಮಾಲಿನ್ಯ ರಹಿತ ಬಸ್ ಆಗಿದ್ದು, ಅಂಗವಿಕಲರು, ಹಿರಿಯ ನಾಗರಿಕರಿಗೆ ಇದರಿಂದ ಅನುಕೂಲವಾಗಲಿದೆ. ಅಂಗವಿಕಲರಿಗೆ ಬಸ್ ಹತ್ತಲು ತುಂಬ ಅನುಕೂಲಕಾರಿಯಾಗಿ ಲೋ ಫ್ಲೋರ್ ವ್ಯವಸ್ಥೆ ಇರಲಿದೆ. 12 ಮೀಟರ್ ಉದ್ದ ಹಾಗೂ 35 ಆಸನದ ವ್ಯವಸ್ಥೆಯಿದೆ. ಬಸ್​ನ ನಾಲ್ಕು ಕಡೆ ಸಿಸಿಟಿವಿ ಅಳವಡಿಕೆ ಮಾಡಿದ್ದು, ಒಂದು ಬಾರಿ ಚಾರ್ಜ್ ಮಾಡಿದ್ರೆ, 200 ಕಿಮೀ ಮೀಟರ್​​​ವರೆಗೆ ಸಂಚರಿಸಲಿದೆ.

3 ತಿಂಗಳಿನಲ್ಲಿ 921 ಇವಿ ಬಸ್ ಸೇವೆ

ವಿಶೇಷವೆಂದ್ರೆ, ಡ್ರೈವರ್ ಎಕ್ಸ್​ಲೇಟರ್ ಒತ್ತದಿದ್ದರೆ ಆಟೋಮೆಟಿಕ್ ಚಾರ್ಜಿಂಗ್ ಆಗಲಿದೆ. ಸದ್ಯ, ಈ ಬಸ್​ಗಳು ಮೆಜೆಸ್ಟಿಕ್ ಟು ರಾಜಾಜಿನಗರ ಇಂಡಸ್ಟ್ರಿಯಲ್ ಏರಿಯಾಗೆ ಒಂದು ವಾರ ಟ್ರಯಲ್ ರನ್ ನಡೆಯಲಿದ್ದು, ಇದಾದ ನಂತ್ರ ಮೂರು ತಿಂಗಳಿನಲ್ಲಿ 921 ಇವಿ ಬಸ್ ಸೇವೆ ಲಭ್ಯವಾಗಲಿದೆ.

ಇನ್ಮುಂದೆ ಬೆಂಗಳೂರಿನ ನಾಗರಿಕರು ಸ್ಮಾರ್ಟ್, ಸುರಕ್ಷಿತ ಮತ್ತು ಹಸಿರು ಸಾರ್ವಜನಿಕ ಸಾರಿಗೆ ಬಳಸಲಿದ್ದಾರೆ.. ಪರಿಸರಕ್ಕೆ ಪೂರಕವಾದ ಟಾಟಾ ಮೋಟಾರ್ಸ್‌ನ ಸ್ಮಾರ್ಟ್ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಬಿಎಂಟಿಸಿ ಆರಂಭಿಸಿದ್ದು, ಬಸ್​ಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ.

RELATED ARTICLES

Related Articles

TRENDING ARTICLES