ಹಾಸನ : ಜಿಲ್ಲಾ ಪಂಚಾಯತ್ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಹಕಾರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿ ಶಾಸಕರ ಕಾಲೆಳೆದಿದ್ದಾರೆ.
ಕೆಡಿಪಿ ಸಭೆಗೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ತಡವಾಗಿ ಬಂದ್ರು. ಆಗ ಜಿಲ್ಲಾ ಮಟ್ಟದ ಅಧಿಕಾರಿ ಸಿಮೆಂಟ್ ಮಂಜುಗೆ ಸ್ವಾಗತ ಕೋರಿದ್ರು. ಈ ವೇಳೆ ಮಧ್ಯಪ್ರವೇಶ ಮಾಡಿದ ರಾಜಣ್ಣ ಅವರು, ‘ಏ.. ಬರೀ ಮಂಜು ಅನ್ನಬೇಡಪ್ಪಾ.. ಧರ್ಮಸ್ಥಳ ಬೇರೆ ಹತ್ರ ಇದೆ’ ಅಂತಾ ಕಾಲೆಳೆದ್ರು.
ಸುಮ್ನೆ ತಮಾಷೆ ಮಾಡಿದೆ. ಮಂಜು ನನ್ನ ಒಳ್ಳೆಯ ಗೆಳೆಯ ಅದಕ್ಕೆ ಹೇಳಿದೆ ಅಂದ ಮರುಕ್ಷಣವೇ ಮತ್ತೊಬ್ಬ ಬಿಜೆಪಿ ಶಾಸಕ ಸುರೇಶ್ನನ್ನ ನೋಡಿ ನೀನು ಕೂಡ ಒಳ್ಳೆಯ ಗೆಳೆಯನೇ ಕಣಪ್ಪ.. ಮತ್ತೆ ನೀನ್ ಬೇಜಾರ್ ಮಾಡ್ಕೊ ಬಿಟ್ಟೀಯ ಅಂದ್ರು.
ಇದನ್ನೂ ಓದಿ : ಇದೇನು ಪ್ರಜಾಪ್ರಭುತ್ವವೋ? ಸಿದ್ದರಾಮಯ್ಯರ ತುಘಲಕ್ ದರ್ಬಾರೋ? : ಬಿಜೆಪಿ ಕಿಡಿ
ಪಕ್ಷಾತೀತ ನಾಯಕ ಅಂತ ಒಪ್ಪಿಕೊಂಡಿದ್ದೇವೆ
ಇನ್ನು ಮಾತು ಮುಂದುವರೆಸಿ, ಈ ಬಿಜೆಪಿಯವರ ಬಗ್ಗೆ ಏನ್ ಮಾತಾಡಿದ್ರೂ ತಪ್ಪು ಎಂದು ಹೇಳಿದ್ರು. ಇದಕ್ಕೆ ತಕ್ಷಣವೇ ಉತ್ತರ ನೀಡಿದ ಶಾಸಕ ಸುರೇಶ್, ನಾವು ನಿಮ್ಮನ್ನ ಪಕ್ಷಾತೀತ ನಾಯಕ ಎಂದು ಒಪ್ಪಿಕೊಂಡಿದ್ದೇವೆ, ನೀವು ನೋಡಿದ್ರೆ ನಮ್ಮನ್ನ ಬಿಜೆಪಿ ಅಂತಾ ಬೇರೆ ಮಾಡೋ ಮಾತಾಡ್ತೀರಲ್ಲಾ ಅಂದ್ರು. ಆಯ್ತು ಆ ವಿಷಯ ಬಿಡು ಎಂದು ವಿಷಯ ಅಂತ್ಯಗೊಳಿಸಿದ್ರು.
ಇಂತಹ ಅಶಿಸ್ತನ್ನ ಸಹಿಸೋದಿಲ್ಲ
ಇದೇ ವೇಳೆ ಎಲ್ಲಾ ಅಧಿಕಾರಿಗಳ ಮೌಖಿಕ ಹಾಜರಾತಿ ಪಡೆದ್ರು. ಸಭೆಗೆ ತಡವಾಗಿ ಬಂದ ಹಾಗೂ ಗೈರಾದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು. ನಾನು ಇಂತಹ ಅಶಿಸ್ತನ್ನ ಸಹಿಸೋದಿಲ್ಲ ಎಂದು ಗರಂ ಆದರು. ಯಾರು ತಡವಾಗಿ ಬಂದಿದ್ದಾರೆ ಅವರಿಗೆ ಮಾರ್ಕ್ ಮಾಡಿ ಹೇಳಿ. ಯಾರು ಸಭೆಗೆ ಬಂದಿಲ್ಲ ಅವರಿಗೆ ನೋಟಿಸ್ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ರು.