Wednesday, January 22, 2025

ಮಹಿಳಾ ಸುರಕ್ಷತೆ ದೃಷ್ಟಿಯಿಂದ ಉಡುಪಿ ಪ್ರಕರಣವನ್ನು NIAಗೆ ಕೊಡಿ : ರವಿಕುಮಾರ್

ಬೆಂಗಳೂರು : ರಾಜ್ಯದ ಮಹಿಳಾ ಸುರಕ್ಷತೆ ದೃಷ್ಟಿಯಿಂದ ಉಡುಪಿ ಪ್ರಕರಣವನ್ನು ಎನ್​ಐಎಗೆ ಕೊಡಿ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿ ಕಾಲೇಜಿನ ಶೌಚಾಲಯ ರೂಮಲ್ಲಿ ವೀಡಿಯೋ ಮಾಡಿರೋ ಘಟನೆ ದೇಶಾದ್ಯಂತ ಚರ್ಚೆಯಾಗ್ತಿದೆ. ದುರಂತ ಅಂದ್ರೆ ವೀಡಿಯೋ ಮಾಡಿದ ಶಬನಾಜ್, ಅಲೀಫ್, ಅಲಿಯಾ ಅವರನ್ನು ಬಂಧನ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಕಿಡಿಕಾರಿದ್ದಾರೆ.

ಬೆಡ್ ರೂಮಲ್ಲಿ, ಶೌಚಾಲಯದಲ್ಲಿ ಯಾರೂ ವೀಡಿಯೋ ಮಾಡಲ್ಲ. ಆದ್ರೆ ಶೌಚಾಲಯ ಹೋದಾಗ ವೀಡಿಯೋ ಮಾಡಿದ್ದಾರೆ. ಆದ್ರೆ ಇದು ಎಂತ ದುರಂತ ಕೆಲಸ. ಇದರಲ್ಲೂ ತುಷ್ಟೀಕರಣ ಮಾಡ್ತಿದೆಯಾ ಅಂತ ಪ್ರಶ್ನೆ ಮಾಡ್ತೀನಿ. ಗೃಹಸಚಿವರು ಹೇಳ್ತಾರೆ ಹುಡುಗಾಟಿಕೆಗೆ ಮಾಡಿದ್ದಾರೆ ಅಂತ ಎಂದು ಕೆಂಡಾಮಂಡಲವಾದರು. ಇದು ಮಕ್ಕಳಾಟಾನಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ವಿಡಿಯೋ ಚಿತ್ರೀಕರಣ : ಮೂವರು ವಿದ್ಯಾರ್ಥಿನಿಯರಿಗೆ ಜಾಮೀನು

ಐದಾರು ತಿಂಗಳಿಂದ ನಡೀತಿದೆ

ಕಾಂಗ್ರೆಸ್ ಸರ್ಕಾರಕ್ಕೆ ಈ ವಿಚಾರದ ಗಾಂಭೀರ್ಯ ಇಲ್ಲ. ಇದನ್ನು ತಮಾಷೆ ವಿಚಾರ ಮಾಡಿಕೊಂಡಿದೆ. ಇದನ್ನು ಬಿಜೆಪಿ ಖಂಡಿಸುತ್ತೆ. 18ರಂದು ಘಟನೆ ನಡೆದಿದ್ರೆ,‌ 26ರಂದು ಎಫ್​ಐಆರ್ (FIR) ಮಾಡ್ತಾರೆ. ಬಗೆದಷ್ಟು ವಿಚಾರ ಸಿಗ್ತಿದೆ. ಈ ತರ ಘಟನೆ ಐದಾರು ತಿಂಗಳಿಂದ ನಡೀತಿದೆ ಅಂತ ಅಲ್ಲಿನ ವಿದ್ಯಾರ್ಥಿನಿಯರು ಹೇಳಿದ್ದಾರೆ. ಇದರ ಹಿಂದೆ ಪಿಎಫ್​ಐ (PFI) ಅಥವಾ ಬೇರೆ ಯಾರಿದ್ದಾರೆ ಗೊತ್ತಿಲ್ಲ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES