ಬೆಂಗಳೂರು: ಬ್ರ್ಯಾಂಡ್ ಬೆಂಗಳೂರನ್ನು ಮಾಡಲು ಹೊರಟಿರುವ ಉಪಮುಖ್ಯಮಂತ್ರಿಗಳು, ಮೊದಲು ಪೌರಕಾರ್ಮಿಕರ ಮೂಲ ಸಮಸ್ಯೆಗಳನ್ನು ಬಗೆಹರಿಸಿ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದು ಆಗ್ರಹಿಸಿದರು.
ಇದನ್ನೂ ಓದಿ: ರೀಲ್ಸ್ ಹುಚ್ಚು: ಐ-ಫೋನ್ ಖರೀದಿಗೆ 8 ತಿಂಗಳ ಮಗುವನ್ನು ಮಾರಿದ ತಂದೆತಾಯಿ!
ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ನಡೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು. ಬೆಂಗಳೂರು ನಗರ ಆರೋಗ್ಯ, ಸ್ವಚ್ಛತೆಯನ್ನು ಕಾಪಾಡುತ್ತಿರುವ ಪೌರಕಾರ್ಮಿಕರ ವೇತನದಲ್ಲಿನ 500 ಕೋಟಿಗೂ ಹೆಚ್ಚು ಇ.ಎಸ್.ಐ ಮತ್ತು ಪಿ.ಎಫ್ ಹಣವನ್ನು ಕಳೆದ 5 ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದು ಇವರ ಭವಿಷ್ಯ ಹಾಗೂ ಆರೋಗ್ಯದೊಂದಿಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಕಸ ವಿಲೇವಾರಿ ಗುತ್ತಿಗೆದಾರರು ಸೇರಿ ಕಾರ್ಮಿಕರ ಜೀವನಕ್ಕೆ ಸಂಚಕಾರ ತರುತ್ತಿದ್ದಾರೆ ಇದೊಂದು ಆತಂಕಕಾರಿ ಬೆಳವಣಿಗೆ ಎಂದರು.
ಬಿಬಿಎಂಪಿಯಲ್ಲಿ ಕಸ ನಿರ್ವಹಣೆಗೆ ಇರುವ ಪೌರಕಾರ್ಮಿಕರ ಒಟ್ಟು ಸಂಖ್ಯೆ 32,000, ಇದರಲ್ಲಿ ಕೇಲವ 700 ಪೌರಕಾರ್ಮಿಕರು ಮಾತ್ರ ಖಾಯಂ ನೌಕರರಾಗಿದ್ದಾರೆ. 16,000 ಪೌರ ಕಾರ್ಮಿಕರಿಗೆ ಪಾಲಿಕೆಯು ನೇರ ವೇತನವನ್ನು ನೀಡುತ್ತಿದೆ, ಇನ್ನುಳಿದ 16,000 ಕಾರ್ಮಿಕರು ಗುತ್ತಿಗೆ ಏಜೆನ್ಸಿಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪೌರಕಾರ್ಮಿಕರಿಗೆ ನೀಡುವ ವೇತನದಲ್ಲೂ ಅನ್ಯಾಯ, ಪ್ರತಿ ತಿಂಗಳು ನೀಡಬೇಕಾದ ಸಂಬಳವನ್ನು ಮೂರು ತಿಂಗಳಿಗೊಮ್ಮೆ ನೀಡಿ, ಪ್ರತಿ ಕಾರ್ಮಿಕರ ವೇತನದಲ್ಲಿ ಸದಾ ಬಾಕಿ ಉಳಿಸಿಕೊಳ್ಳುತ್ತಿದೆ. ಬಿಬಿಎಂಪಿಯು ತನ್ನ ಕಾರ್ಮಿಕರ ಭವಿಷ್ಯ ಹಾಗೂ ಆರೋಗ್ಯದಂತ ಅತಿ ಮುಖ್ಯ ವಿಚಾರದಲ್ಲಿ ಒಳ ಒಪ್ಪಂದ ಮಾಡಿಕೊಂಡು ಈ ರೀತಿಯ ನೂರಾರು ಕೋಟಿ ಅವ್ಯವಹಾರಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದು ದಾಖಲೆಗಳ ಸಮೇತ ಅವರು ಮಾಹಿತಿ ನೀಡಿದರು.