ಬೆಂಗಳೂರು : ಒಳ ಮೀಸಲಾತಿಗೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಉತ್ತರಿಸಿದ್ದಾರೆ. 7 ರಾಜ್ಯಗಳು ಒಳ ಮೀಸಲಾತಿಗೆ ಬೇಡಿಕೆ ಇಟ್ಟಿವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೇಂದ್ರಕ್ಕೆ ಹಿಂದೆ ಶಿಫಾರಸು ಮಾಡಿದ್ದೆವು. 13 ರಾಜ್ಯಗಳ ಒಳ ಮೀಸಲು ಬೇಡ ಎಂದು ಹೇಳಿವೆ. ಕರ್ನಾಟಕವೂ ಸೇರಿ ಏಳು ರಾಜ್ಯ ಬೇಡಿಕೆ ಇಟ್ಟಿವೆ. ಎರಡು ಮೂರು ರಾಜ್ಯ ತಟಸ್ಥ ಧೋರಣೆ ತಾಳಿವೆ. ಈ ಒಳ ಮೀಸಲಾತಿ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆಗೆ ಬಂದಿದೆ. ನಾವು ಈಗ ಒಳ ಮೀಸಲಾತಿ ಕೊಡಲು ಆಗಲ್ಲ. ಕಾಯ್ದೆ ತಿದ್ದುಪಡಿಯಾಗದೆ ಕೊಡಲಾಗಲ್ಲ ಎಂದು ಹೇಳಿದ್ದಾರೆ.
ಆಂಧ್ರದಲ್ಲಿ ಒಳ ಮೀಸಲಾತಿ ಹಂಚಲಾಗಿತ್ತು. ಇದರ ವಿರುದ್ಧ ಸುಪ್ರೀಂಗೆ ಹೋಗಲಾಗಿತ್ತು. ಇದಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಒಳ ಮೀಸಲು ಬರಲು 341ಗೆ ತಿದ್ದುಪಡಿಯಾಗಬೇಕು. ಆಗ ಮಾತ್ರ ಇದು ಅಸ್ತಿತ್ವಕ್ಕೆ ಬರಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.