Monday, December 23, 2024

ಸಿದ್ರಾಮಣ್ಣನೇ ನನ್ನ ಮಿನಿಸ್ಟ್ರು ಮಾಡ್ತೇವೆ ಅಂದಿದ್ದಾರೆ : ಶಾಸಕ ಶಿವಲಿಂಗೇಗೌಡ

ಬೆಂಗಳೂರು : ಸಿದ್ರಾಮಣ್ಣನೇ ಶಿವಲಿಂಗೇಗೌಡರನ್ನು ಸಚಿವರನ್ನ ಮಾಡ್ತೇವೆ ಅಂದಿದ್ದಾರೆ. ಕಾಯೋಣ ಅವರು ಕೊಡುವವರೆಗೆ ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.

ಮಂತ್ರಿ ಸ್ಥಾನ ಸಿಗದಿರುವುದಕ್ಕೆ ಶಿವಲಿಂಗೇಗೌಡರಿಗೆ ಅಸಮಾಧಾನ ಇದ್ಯಾ? ಎಂಬ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನವಿಲ್ಲ ಎಂದರು.

ಎಂಟು ದಿನ ನನಗೂ‌ ಅಸಮಾಧಾನವಿತ್ತು. ಅದರೆ, ಈಗ ಯಾವ ಅಸಮಾಧಾನವಿಲ್ಲ. ಎರಡೂವರೆ ವರ್ಷವೋ, ಮೂರು ವರ್ಷವೋ, ಒಂದೂವರೆ ವರ್ಷವೋ ಕಾಯೋಣ. ಕೊಡ್ತೇವೆ ಅಂತ ಅವರೇ ಹೇಳಿದ್ದಾರೆ. ಕೊಡುವವರೆಗೂ ನಾವು ಕಾಯೋಣ ಎಂದು ಪರೋಕ್ಷವಾಗಿ ಮಂತ್ರಿಗಿರಿ ಆಸೆ ಬಿಚ್ಚಿಟ್ಟರು.

ಇದನ್ನೂ ಓದಿ : ಡಿ.ಕೆ ಶಿವಕುಮಾರ್ ಕೂಡ ಕಲ್ಲು ಬಂಡೆ ಇದ್ದಂಗೆ : ಶಿವಲಿಂಗೇಗೌಡ

ಮಂತ್ರಿ ಸ್ಥಾನ ಸಿಗಲಿಲ್ಲ ಅಂತ ನೋವು

ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅಸಮಾಧಾನ ವಿಚಾರವಾಗಿ ಮಾತನಾಡಿ, ಹರಿಪ್ರಸಾದ್ ಎಲ್ಲೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಸಿಎಂ ಬದಲಾಯಿಸ್ತೇವೆ ಅಂತ ಎಲ್ಲಿ ಹೇಳಿದ್ರು. ಅವರು ಎಲ್ಲೂ ಹೇಳಿಲ್ಲ, ನೀವೇ ಹಾಕಿಬಿಟ್ರಿ. ಅವರಿಗೆ ಸ್ವಲ್ಪ ಸಣ್ಣ ನೋವು ಇರಬಹುದು. ಸಚಿವ ಸ್ಥಾನ ಸಿಗಲಿಲ್ಲ ಅಂತ ಇರಬಹುದು. ಆದರೆ, ಎಲ್ಲೂ ಅಸಮಾಧಾನ ಮಾಡಿಲ್ವಲ್ಲಾ? ಎಂದು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದರು.

RELATED ARTICLES

Related Articles

TRENDING ARTICLES