Monday, December 23, 2024

ಆ.31ಕ್ಕೆ ಶಿವಮೊಗ್ಗದಿಂದ ವಿಮಾನ ಹಾರಾಟ, ಬುಕ್ಕಿಂಗ್ ಶುರು

ಶಿವಮೊಗ್ಗ : ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಹಾರಾಟಕ್ಕೆ ಬುಕ್ಕಿಂಗ್​ ಶುರುವಾಗಿದೆ. ನಿನ್ನೆ ಸಂಜೆಯಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಈ ಸಂಬಂಧ ಇಂಡಿಗೋ ಸಂಸ್ಥೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಆನ್​ಲೈನ್​ ಬುಕ್ಕಿಂಗ್ ಆರಂಭಿಸಿದ್ದು, ಆಗಸ್ಟ್ 31ರಿಂದ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಿದೆ. ಇಂಡಿಗೋ ವಿಮಾನ ಆಗಸ್ಟ್​ 31ರ ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಶಿವಮೊಗ್ಗಕ್ಕೆ 11.05ಕ್ಕೆ ಆಗಮಿಸಲಿದೆ. ಅದೇ ದಿನ ಬೆಳಗ್ಗೆ 11.25ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.25ಕ್ಕೆ ಬೆಂಗಳೂರು ತಲುಪಲಿದೆ.

ಸೇವರ್‌ ಮತ್ತು ಫ್ಲೆಕ್ಸಿ ಪ್ಲಸ್‌ ಟಿಕೆಟ್‌

ವಿಮಾನ ಟಿಕೆಟ್‌ ನಲ್ಲಿ ಇಂಡಿಗೋ ಸಂಸ್ಥೆ ಸೇವರ್‌ ಮತ್ತು ಫ್ಲೆಕ್ಸಿ ಪ್ಲಸ್‌ ಟಿಕೆಟ್‌ಗಳನ್ನು ಪರಿಚಯಿಸಿದೆ. ಸೇವರ್‌ ಮಾದರಿ ಟಿಕೆಟ್‌ನಲ್ಲಿ ಹೆಚ್ಚುವರಿ ಸೌಲಭ್ಯ ಇರುವುದಿಲ್ಲ. ಆದರೆ, ಫ್ಲೆಕ್ಸಿ ಪ್ಲಸ್‌ ಟಿಕೆಟ್‌ನಲ್ಲಿ ಕಾಂಪ್ಲಿಮೆಂಟರಿ ಲಭ್ಯವಿದೆ ಎಂದು ತಿಳಿಸಿದೆ. ಸ್ಟಾಂಡರ್ಡ್‌ ಸೀಟ್‌ ಒದಗಿಸಲಾಗುತ್ತದೆ. ಪ್ರಯಾಣದ ದಿನಾಂಕ ಬದಲಾವಣೆಯಾದರೆ ಹೆಚ್ಚುವರಿ ದರವಿರುವುದಿಲ್ಲ. ಟಿಕೆಟ್‌ ಕ್ಯಾನ್ಸಲ್‌ ಚಾರ್ಜ್‌ ಕೂಡ ಕಡಿಮೆ ಇರಲಿದೆ.

ಇದನ್ನೂ ಓದಿ : ತನಿಖೆಗೂ ಮೊದಲು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲಿ : ಬಿ.ವೈ ರಾಘವೇಂದ್ರ

ಟಿಕಟ್‌ ದರ 6,647 ರೂ. ಫಿಕ್ಸ್

ಆ.31ರಂದು ಪ್ರಯಾಣ ಬೆಳೆಸಿದರೆ ಬೆಂಗಳೂರು-ಶಿವಮೊಗ್ಗ ವಿಮಾನದ ಟಿಕಟ್‌ ದರ ಸೇವರ್‌ ಟಿಕೆಟ್‌ ದರ 6,647 ರೂ. ಫಿಕ್ಸ್ ಮಾಡಲಾಗಿದೆ. ಫ್ಲೆಕ್ಸಿ ಪ್ಲಸ್‌ ಟಿಕೆಟ್‌ ದರ 7,172 ರೂ. ಇದೆ. ಸೆ. ಒಂದರಿಂದ ಟಿಕೆಟ್‌ ದರ ಸೇವರ್‌ ಟಿಕೆಟ್‌ ದರ 3,999 ರೂ, ಫ್ಲೆಕ್ಸಿ ಪ್ಲಸ್‌ ಟಿಕೆಟ್‌ ದರ 4,393 ರೂ. ಎಂದು ಪ್ರಕಟಿಸಲಾಗಿದೆ.

ಒಟ್ಟಾರೆ, ಈ ರೀತಿ ಬುಕ್ಕಿಂಗ್ ಆರಂಭವಾಗಿರುವುದು ವಿಮಾನ ಪ್ರಿಯರಲ್ಲಿ ಸಂತಸ ಮೂಡಿಸಿದೆ.ಶಿವಮೊಗ್ಗದ ಜನರು ವಿಮಾನದ ಟಿಕೆಟ್ ಬುಕ್ಕಿಂಗ್​ಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES