Wednesday, January 22, 2025

ವಿದ್ಯುತ್ ಅವಘಡಕ್ಕೆ ಕುರಿ ಎತ್ತುಗಳು ಸಾವು! ರೈತ ಕಂಗಾಲು

ಕೊಪ್ಪಳ : ರಾಜ್ಯದಲ್ಲಿ ವರುಣಾನ ಆರ್ಭಟ ಮುಂದುವರೆದಿದ್ದು ನಿರಂತರ ಮಳೆಯಿಂದಾಗಿ ಟ್ರಾನ್ಸಫಾರ್ಮರ್ ನ ವೈಯರ್ ತುಂಡಾಗಿ ಬಿದ್ದ ಪರಿಣಾಮ ಕುರಿ ಹಾಗೂ ಎತ್ತುಗಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕನಕಗಿರಿ ತಾಲೂಕು ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ.

ಇದನ್ನು ಓದಿ : ಕೃಷ್ಣಾನದಿ ಪಾತ್ರದಲ್ಲಿ ಮೊಸಳೆಗಳು ಪ್ರತ್ಯಕ್ಷ: ನದಿ ಸುತ್ತ ಓಡಾಡದಂತೆ ಜಿಲ್ಲಾಡಳಿತ ಸೂಚನೆ!

ಕರಡಿಗುಡ್ಡ ಗ್ರಾಮದ ಕನಕಪ್ಪ ಎಂಬುವರಿಗೆ ಸೇರಿದ್ದ 15 ಕುರಿಗಳು ಹಾಗೂ ಅದೇ ಗ್ರಾಮದ ಹುಲಗಪ್ಪ ಎಂಬುವರಿಗೆ ಸೇರಿದ 2 ಎತ್ತುಗಳು ಮೃತಪಟ್ಟಿವೆ, ಕೆಲದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವು ಸಾವು-ನೋವು ಸಂಭವಿಸಿದೆ ಇದರ ಬೆನ್ನಲ್ಲೇ ವಿದ್ಯುತ್​ ಅವಘಡಗಳು ಜನರಲ್ಲಿ ಆತಂಕ ಸೃಷ್ಟಿಸಿವೆ.

ಜೆಸ್ಕಾಂ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಜೀವನಕ್ಕೆ ಆಧಾರವಾಗಿದ್ದ ಕುರಿ,ಎತ್ತುಗಳು ಸಾವಿಗೀಡಾಗಿದ್ದು ರೈತರು ಕಂಗಾಲಾಗಿದ್ದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 

RELATED ARTICLES

Related Articles

TRENDING ARTICLES