Monday, December 23, 2024

ಜೀವಂತ ಹಾವನ್ನು ತಂದು ಅಧಿಕಾರಿಗಳ ಚಳಿ ಬಿಡಿಸಿದ ಸ್ಥಳೀಯ ನಿವಾಸಿ!

ಹೈದರಾಬಾದ್​ : ಹಾವುಗಳ ಉಪಟಳಕ್ಕೆ ಬೇಸತ್ತ ಸ್ಥಳಿಯ ನಿವಾಸಿಯೊಬ್ಬರು ಸಿಟ್ಟಿಗೆದ್ದು ಜೀವಂತ ಹಾವನ್ನೇ ತಂದು ಕಛೇರಿಯ ಟೇಬಲ್​ ಮೇಲೆ ಬಿಟ್ಟ ಘಟನೆ ಹೈದರಾಬಾದ್​ನ ಹಲ್ವಾಲ್​ ನಲ್ಲಿ ನಡೆದಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಯರ ಮೊಬೈಲಲ್ಲಿ ವಿಡಿಯೋ ಸಿಕ್ಕಿಲ್ಲ: ಮಹಿಳಾ ಆಯೋಗ ಸದಸ್ಯೆ ಖುಷ್ಬು

ಹಲ್ವಾಲ್​ ಪ್ರದೇಶದಲ್ಲಿ ಹಾವುಗಳ ಉಪಟಳ ಹೆಚ್ಚಾದ ಹಿನ್ನೆಲೆ ಕ್ರಮ ಕೈಗೊಳ್ಳುವಂತೆ ಇಲ್ಲಿನ ನಗರಪಾಲಿಕೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರು ಕ್ರಮ ಕೈಗೊಂಡಿರಲ್ಲಿಲ್ಲ, ಇದರಿಂದ ಬೇಸತ್ತ ಸ್ಥಳಿಯ ನಿವಾಸಿಯೊಬ್ಬರು ಜೀವಂತ ಹಾವನ್ನು ಹಿಡಿದು ತಂದು ನಗರಪಾಲಿಗೆ ಅಧಿಕಾರ ಟೇಬಲ್​ ಮೇಲೆ ಬಿಟ್ಟು ಹೈದರಾಬಾದ್‌ನಲ್ಲಿ ಅಧಿಕಾರಿಗಳ ಚಳಿಬಿಡಿಸಿದ್ದಾನೆ.

ಘಟನೆ ಬಳಿಕ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಸದ್ಯ ಹಲ್ವಾಲ್​ ಪ್ರದೇಶದಲ್ಲಿ ಹೆಚ್ಚಾಗಿರುವ ಹಾವುಗಳ ಸಮಸ್ಯೆಗೆ ಕ್ರಮ ಕೈಗೊಳ್ಳಲು, ಹಾವು ಹಿಡಿಯೋರೇ ಇಲ್ಲ ಎನ್ನೋ ಮಾಹಿತಿ ಬೆಳಕಿಗೆ ಬಂದಿದೆ.

RELATED ARTICLES

Related Articles

TRENDING ARTICLES