Wednesday, January 22, 2025

ಪತ್ನಿ ಕೊಲೆಗೈದು ಹೈಡ್ರಾಮ ಸೃಷ್ಟಿಸಿದ್ದ ಪಾಪಿ ಪತಿ ಅಂದರ್

ಬೆಂಗಳೂರು : ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ಹೈಡ್ರಾಮ ಮಾಡುತ್ತಿದ್ದ ಪತಿಯನ್ನು ವಶಕ್ಕೆ ಪಡೆದಿರುವ ಬಾಣಸವಾಡಿ ಪೋಲಿಸರು.

ಕೆಂಚಮ್ಮ (19) ಕೊಲೆಯಾದ ಮಹಿಳೆ, ಸಿದ್ದಪ್ಪ ಬಸವರಾಜ್ ಬೆನ್ನೂರು ಜೊತೆ ವಿವಾಹವಾಗಿತ್ತು. ಮದುವೆ ಆದ ದಿನದಿಂದಲು ಇಬ್ಬರು ಕಿತ್ತಡುತ್ತಲೆ ಇದ್ದರು, ಆದರೆ ಈ ಭಾರಿ ಇಬ್ಬರ ಜಗಳ ಅತಿರೇಕಕ್ಕೆ ಹೋಗಿದ್ದು, ತಡರಾತ್ರಿ 2 ಗಂಟೆ ಸುಮಾರಿಗೆ ಸಿದ್ದಪ್ಪ ಬಸವರಾಜ್ ತನ್ನ ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.ಹೆಚ್ ಬಿ ಆರ್ ಲೇಔಟಲ್ಲಿ ಘಟನೆ

ಸಿಕ್ಕ ಹಾಕಿಕೊಳ್ಳುವ ಭಯದಿಂದ ಕೊಲೆ ಮಾಡಿದ ಬಳಿಕ ಹೆಂಡತಿಯನ್ನು ನೇಣು ಬಿಗಿದಿದ್ದಾನೆ. ಕೆಂಚಮ್ಮ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂಬಂಧಿಕರಿಗೆ ಕರೆ ಮಾಡಿ ದೊಡ್ಡ ಹೈಡ್ರಾಮವೇ ಮಾಡಿದ್ದ ಸಿದ್ದಪ್ಪ.

ಇದನ್ನು ಓದಿ : ತನ್ವೀರ್ ಸೇಠ್ ಪತ್ರ ಬರೆದಿದ್ದರಲ್ಲಿ ತಪ್ಪೆನಿದೆ? : ಸಚಿವ ಶಿವರಾಜ ತಂಗಡಗಿ

ಕೃತ್ಯ ನೆಡೆದ ಕೆಲವೇ ಗಂಟೆಯಲ್ಲಿ ಅಸಲಿ ಸಂಗತಿ ಬಯಲು.

ಸ್ಥಳಕ್ಕೆ ಬಾಣಸವಾಡಿ ಪೋಲಿಸರು ಭೇಟಿ ನೀಡಿದ್ದು, ಕೃತ್ಯ ನೆಡೆದ ಕೆಲವೇ ಗಂಟೆಗಳಲ್ಲಿ ಅಸಲಿ ಸಂಗತಿ ಬಯಲಾಗಿದೆ. ಕೆಂಚಮ್ಮನ ಸಾವಿನ ಬಗ್ಗೆ ಪರಿಶೀಲನೆಯ ವೇಳೆಯಲ್ಲಿ ಕೊಲೆ ಎಂಬ ಶಂಕೆ ಮೂಡಿದ್ದು, ಸಿದ್ದಪ್ಪನನ್ನು ವಿಚಾರಣೆ ನೆಡೆಸಿದರು. ಆಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದರಿಂದ, ಸದ್ಯ ಆರೋಪಿ ಸಿದ್ದಪ್ಪನನ್ನು ವಶಕ್ಕೆ ಪಡೆದಿರುವ ಪೋಲಿಸರು.

RELATED ARTICLES

Related Articles

TRENDING ARTICLES