Monday, December 23, 2024

ಕತ್ತು ಹಿಡಿದು ದೂಕಿದ್ರೂ, ಯಾರು ಎಲ್ಲಿಗೂ ಹೋಗಲ್ಲ : ಕೆ.ಎಂ ಶಿವಲಿಂಗೇಗೌಡ

ಹಾಸನ : ಕತ್ತು ಹಿಡಿದು ದೂಕಿದರೂ ಯಾರು ಎಲ್ಲಿಗೂ ಹೋಗುವುದಿಲ್ಲ. ನೋಡ್ರಿ ಯಾವ ಸಿಂಗಾಪುರನು ಇಲ್ಲ.. ಏನು ಇಲ್ಲ.. ಎಂದು ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಡಿ.ಎಂ ಕುರ್ಕೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ 135 ಜನ ಗೆದ್ದಿದ್ದೇವೆ. ಸಮಸ್ಯೆಗಳಿಗೆ ಪರಿಹಾರ ಮಾತ್ರ ಕೇಳುತ್ತೇವೆ. ಅದು ಬಿಟ್ರೆ ಯಾರದ್ದೂ ಚಕಾರವಿಲ್ಲ ಎಂದು ಡಿಕೆಶಿ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಸಿದ್ದರಾಮಯ್ಯರನ್ನು ಇಳಿಸೋದು ಗೊತ್ತು ಅಂದ್ರಾ?

ಬಿ.ಕೆ ಹರಿಪ್ರಸಾದ್‌ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ ಎಂಬ ಕಷ್ಟವನ್ನು ಅವರ ಸಮಾಜದ ಎದುರು ತೋಡಿಕೊಂಡಿದ್ದಾರೆ. ಅವರು ಬೇರೆ ರಾಜ್ಯದಲ್ಲಿ‌ ಮುಖ್ಯಮಂತ್ರಿ ಮಾಡಿದ್ದೇವೆ ಅನ್ನೋ ರೀತಿ ಹೇಳಿದ್ದಾರೆ. ಅವರು ಮುಖ್ಯಮಂತ್ರಿ ಮಾಡೋದು ಗೊತ್ತು. ಇಳಿಸೋದು ಗೊತ್ತು ಎಂದಿದ್ದಾರೆ. ಸಿದ್ದರಾಮಯ್ಯರನ್ನು ಇಳಿಸೋದು ಗೊತ್ತು ಎಂದಿದ್ದಾರಾ? ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES