ಮೈಸೂರು : ರೇಷ್ಮೆ ಸೀರೆ ರೇಟು ಸಚಿವರಿಗೇ ಗೊತ್ತಿಲ್ವ? ಎಂಬ ಪತ್ರಕರ್ತರ ಪ್ರಶ್ನೆಗೆ ರೇಷ್ಮೆ ಸಚಿವ ಕೆ. ವೆಂಕಟೇಶ್ ತಬ್ಬಿಬ್ಬಾದ ಪ್ರಸಂಗ ನಡೆಯಿತು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಷ್ಮೆ ಸೀರೆಗಳ ರೇಟು ಎಷ್ಟಿದೆ ಅಂತ ನನಗೆ ಗೊತ್ತಿಲ್ಲ. 30 ಸಾವಿರ 40 ಸಾವಿರ ಇರಬಹುದು ಎಂದರು.
ಅಷ್ಟು ದುಬಾರಿ ಸೀರೆ ಖರೀದಿಸಲು ಬಡವರಿಗೆ ಆಗಲ್ಲ ಅನ್ನುವ ಮಾತು ಇದೆ. ಮೊದಲ ನಾನು ಸೀರೆ ರೇಟು ಎಷ್ಟಿದೆ ಅಂತ ತಿಳಿದುಕೊಳ್ಳುತ್ತೇನೆ. ಕಡಿಮೆ ರೇಟಿಗೆ ಸೀರೆ ತಾಯಾರು ಮಾಡಬಹುದಾ ಅಂತ ಅಧಿಕಾರಿಗಳ ಜೊತೆ ಚರ್ಚಿಸಿ ನಂತರ ನಿಮಗೆ ತಿಳಿಸುತ್ತೇನೆ ಎಂದು ಸಚಿವ ವೆಂಕಟೇಶ್ ಹೇಳಿದರು.
ಇದನ್ನೂ ಓದಿ : ಸಾಲ ಮನ್ನಾ ಪ್ರಸ್ತಾಪ ಇಲ್ಲ, ಗ್ಯಾರಂಟಿಗೇ ಮೊದಲ ಆದ್ಯತೆ : ಸಚಿವ ರಾಜಣ್ಣ
ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೆ ಇರುತ್ತೆ
ಸಚಿವರ ವಿರುದ್ಧ ಸ್ವಪಕ್ಷದ ಶಾಸಕರೇ ಅಸಮಾಧಾನ ಹೊರಹಾಕಿರುವ ವಿಚಾರ ಕುರಿತು ಮಾತನಾಡಿ, ಒಂದು ಮನೆಯಲ್ಲಿ ನಾಲ್ಕು ಜನ ಇದ್ದರೆ ಅವರಲ್ಲೇ ಭಿನ್ನಾಭಿಪ್ರಾಯ ಇರುತ್ತದೆ. ಇನ್ನೂ ಸರ್ಕಾರ ಅಂದಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ವಿರೋಧ ಪಕ್ಷದವರಿಗೆ ಹೊಟ್ಟೆ ಹುರಿ
ಒಂದಷ್ಟು ಶಾಸಕರು ಸಿಎಂಗೆ ಪತ್ರ ಬರೆದಿರುವುದು ನಿಜ. ಅಂದ ಮಾತ್ರಕ್ಕೆ ಏನೋ ಆಗಿದೆ ಅಂದುಕೊಳ್ಳಬೇಕಿಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ಯಾರು ಏನೂ ಮಾಡೋಕೆ ಆಗಲ್ಲ. ಇದನ್ನು ಕಂಡು ವಿರೋಧ ಪಕ್ಷದವರಿಗೆ ಹೊಟ್ಟೆ ಹುರಿ. ಅದಕ್ಕೆ ಸಿಂಗಾಪುರ, ಮತ್ತೊಂದು ಮಗದೊಂದು ಅಂತ ಏನೇನೋ ಮಾಡಿದ್ದಾರೆ. ಅದ್ಯಾವುದೂ ಇಲ್ಲಿ ನಡೆಯುವುದಿಲ್ಲ ಎಂದು ಪ್ರತಿಪಕ್ಷಗಳಿಗೆ ಕುಟುಕಿದರು.