Tuesday, November 5, 2024

AI ಮಹಾಭಾರತದಲ್ಲಿ ಕಿಚ್ಚ-ದಚ್ಚು, ಯಶ್-ಧ್ರುವ, ಶಿವಣ್ಣ-ಅಪ್ಪು

ಬೆಂಗಳೂರು : ಸ್ಯಾಂಡಲ್​ವುಡ್ ಅಂಗಳದಲ್ಲಿ AI ಮಹಾಭಾರತ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕಿಚ್ಚ-ದಚ್ಚು, ಯಶ್-ಧ್ರುವ, ಶಿವಣ್ಣ-ಅಪ್ಪು ಸೇರಿದಂತೆ ಶೆಟ್ರ ಟೀಂ ಹೆಸರುಗಳು ಕೂಡ ಇದರಲ್ಲಿ ತಳಕು ಹಾಕಿಕೊಂಡಿವೆ.

ಮುನಿರತ್ನ ಕುರುಕ್ಷೇತ್ರದ ಬಳಿಕ ಕನ್ನಡದಲ್ಲಿ ಮತ್ಯಾವ ಮಹಾಭಾರತದ ಕಥೆಯೂ ಬರಲಿಲ್ಲ. ಆದರೆ, ಆದಿಪುರುಷ್ ಹೆಸರಲ್ಲಿ ಪ್ರಭಾಸ್ ರಾಮಾಯಣ ಕುರಿತ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಟೀಕೆಗೆ ಗುರಿಯಾದರು. ಕಳಪೆ ಗ್ರಾಫಿಕಲ್ ಪ್ರೆಸೆಂಟೇಷನ್​​ನಿಂದ ರಾಮಾಯಣಕ್ಕೆ ಧಕ್ಕೆ ತರುವ ಕಾರ್ಯ ಮಾಡಿದರು. ಸದ್ಯ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿಗೆ ಮಹಾಭಾರತ ಸಿನಿಮಾ ಮಾಡಲು ಒತ್ತಡ ಹೆಚ್ಚಿದ್ದು, ಸುಮಾರು 10 ಭಾಗಗಳಲ್ಲಿ ಮಹಾಭಾರತ ಮಾಡಲಿದ್ದಾರೆ ಎನ್ನಲಾಗ್ತಿದೆ.

ಆದರೆ, ಮೌಳಿಯ ಮಹಾಭಾರತಕ್ಕೂ ಮುನ್ನ ನಮ್ಮ ಸ್ಯಾಂಡಲ್​ವುಡ್ ಅಂಗಳದಲ್ಲಿ ಮತ್ತೊಂದು ಮಹಾಭಾರತ ಹಾಗೂ ಅದರಲ್ಲಿನ ಕ್ಯಾರೆಕ್ಟರ್​ಗಳ ಲುಕ್ಸ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿವೆ. ಅದು AI ಮಹಾಭಾರತ. ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಹಾಭಾರತ. ಮುಂದುವರಿದ ತಂತ್ರಜ್ಞಾನದಿಂದಲೇ ಪಾತ್ರಗಳನ್ನ ಸೃಷ್ಟಿಸಿ, ಅವುಗಳಿಗೆ ಜೀವ ತುಂಬುವ ಕೆಲಸ ಇದು ಮಾಡಲಿದೆ.

ಮತ್ತೆ ದುರ್ಯೋಧನನಾಗಿ ‘ಡಿ ಬಾಸ್’

ಈ AI ಮಹಾಭಾರತದ ಪ್ರಕಾರ ನಟ ದರ್ಶನ್ ದುರ್ಯೋಧನ, ಕರ್ಣನಾಗಿ ಯಶ್, ಭೀಮನಾಗಿ ಧ್ರುವ ಸರ್ಜಾ, ಶಕುನಿಯಾಗಿ ರಾಜ್ ಬಿ ಶೆಟ್ಟಿ, ಕೃಷ್ಣನ ಅವತಾರದಲ್ಲಿ ಸುದೀಪ್, ಭೀಷ್ಮನಾಗಿ ರಿಷಬ್ ಶೆಟ್ಟಿ, ಗುರು ದ್ರೋಣಾಚಾರ್ಯರ ಅವತಾರದಲ್ಲಿ ಶಿವರಾಜ್​ಕುಮಾರ್ ಮಿಂಚುತ್ತಿದ್ದಾರೆ. ದ್ರೌಪದಿ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಮಾಲ್ ಮಾಡುತ್ತಿದ್ದು, ಪರಾಕ್ರಮಿ ಅರ್ಜುನನಾಗಿ ರಾಜರತ್ನ ಅಪ್ಪು ಗಮನ ಸೆಳೆದಿದ್ದಾರೆ.

ಅರೇ ಅಪ್ಪು ಇಲ್ಲವಲ್ಲಾ? ಅವರ ಪಾತ್ರ ಹೇಗೆ ಅಂತ ನೀವು ಕೇಳಬಹುದು. ಇದು ಟೆಕ್ನಾಲಜಿ ಸಪೋರ್ಟ್​ನಿಂದಲೇ ಮಾಡಬಹುದಾದ ಮಹಾಭಾರತ ಆಗಿರೋದ್ರಿಂದ, ಅಪ್ಪು ಪಾತ್ರಕ್ಕೂ ಜೀವ ತುಂಬಬಹುದು ಅನ್ನೋದಕ್ಕೆ ಈ ಪೋಸ್ಟರ್ ಸಾಕ್ಷಿ ಆಗುತ್ತಿದೆ. ಎಲ್ಲಾ ಪಾತ್ರಗಳಿಗೆ ಚಿತ್ರರಂಗದ ಸ್ಟಾರ್ಸ್​ ಹೇಳಿ ಮಾಡಿಸಿದಂತಿದೆ. ಈ AI ಮಹಾಭಾರತದ ಲುಕ್ ಪೋಸ್ಟರ್ಸ್​ ಅದ್ಯಾರು ಕ್ರಿಯೇಟ್ ಮಾಡಿದ್ರೋ ಏನೋ ಗೊತ್ತಿಲ್ಲ. ನೋಡುಗರಿಗೆ ವ್ಹಾವ್ ಫೀಲ್ ಕೊಡ್ತಿದೆ. ಎಲ್ಲೆಡೆ ಸಖತ್ ವೈರಲ್ ಆಗುತ್ತಿವೆ.

AI ಆ್ಯಂಕರ್ ಸೌಂದರ್ಯ ಟ್ರೆಂಡಿಂಗ್

ಎಲ್ಲಾ ಸ್ಟಾರ್​​ಗಳ ಅಭಿಮಾನಿಗಳು ಇವುಗಳಿಗೆ ಅಭೂತಪೂರ್ವ ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, AI ಮಹಾಭಾರತ ಮಾಡೋದಾದ್ರೆ ಇಂತಿಂತ ಪಾತ್ರಗಳಿಗೆ ಇವ್ರು ಸೂಟ್ ಆಗ್ತಾರೆ ಅನ್ನೋದನ್ನ ಊಹಿಸಿ, ಈ ರೀತಿ ಗ್ರಾಫಿಕಲ್ ಪ್ರೆಸೆಂಟ್ ಮಾಡಲಾಗಿದೆ. ಅಂದಹಾಗೆ AI ಌಂಕರ್ ಸದ್ಯ ಟ್ರೆಂಡಿಂಗ್​ನಲ್ಲಿದೆ. ಅದನ್ನ ದಕ್ಷಿಣ ಭಾರತದ ಸುದ್ದಿ ವಾಹಿನಿಯಲ್ಲಿ ಮೊದಲ ಬಾರಿ ಪ್ರೆಸೆಂಟ್ ಮಾಡಿದ ಗರಿಮೆ ‘ಪವರ್ ಟಿವಿ’ಗೆ ಸಲ್ಲುತ್ತೆ. AI ಆ್ಯಂಕರ್ ಸೌಂದರ್ಯನ ಹುಟ್ಟಿಹಾಕಿ, ಆ ಮೂಲಕ ನ್ಯೂಸ್ ಪ್ರಸ್ತುತ ಪಡಿಸಿತ್ತು ಪವರ್ ಟಿವಿ. ಸದ್ಯ AI ಮಹಾಭಾರತ ಕೂಡ ಅದೇ ರೀತಿ ತೆರೆಗೆ ಬಂದ್ರೂ ಅಚ್ಚರಿಯಿಲ್ಲ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES