Monday, January 13, 2025

ಟಿಕೆಟ್ ತೆಗೆದುಕೊಳ್ಳದೇ ಕಂಡಕ್ಟರ್ ಗೆ ಅವಾಜ್ ಹಾಕಿದ ಲೇಡಿ!

ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಪ್ರಯಾಣದ ವೇಳೆ ಮಹಿಳೆಯೊಬ್ಬರು ಟಿಕೆಟ್ ತೆಗೆದುಕೊಳ್ಳದೇ ಕಂಡಕ್ಟರ್ ಗೆ ಅವಾಜ್ ಹಾಕಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.

ಬನಶಂಕರಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ನಲ್ಲಿ ಬಸ್ ನಲ್ಲಿ ಘಟನೆ ನಡೆದಿದೆ. ಪ್ರಯಾಣದ ವೇಳೆ ದುಡ್ಡು ಕೊಟ್ಟು ಟಿಕೆಟ್ ತೆಗೆದುಕೊಳ್ಳದೇ ಲೇಡಿ ಕಿರಿಕ್ ಮಾಡಿಕೊಂಡಿದ್ದಾರೆ. ನಾನು ಸೆಂಟ್ರಲ್ ಗವರ್ನಮೆಂಟ್ ಸಿಬ್ಬಂದಿ ಐಡಿ ಕಾರ್ಡ್ ಇದೆ ನನ್ನ ಬಳಿ ದುಡ್ಡು ಕೊಡಲ್ಲ. ಏನ್ ಮಾಡ್ಕೊತಿಯೋ ಮಾಡ್ಕೊ ಹೋಗು ಅಂತ ಕಂಡಕ್ಟರ್ ಗೆ ಅವಾಜ್ ಹಾಕಿದ್ದಾರೆ.

ಕೇಂದ್ರ ಸರ್ಕಾರದ ಐಡಿ ಏನಿದೆ ತೋರಿಸಿ ಎಂದರೂ ತೋರಿಸದೆ ಮಹಿಳೆ ಕಿರಿಕ್ ಮಾಡಿದ್ದಾರೆ. ಬಾಯಿಗೆ ಬಂದ ಹಾಗೆ ಅವಾಚ್ಯ ಪದಗಳಿಂದ ಕಂಡಕ್ಟರ್ ನಿಂದಿಸಿದ್ದಾರೆ. ಯಾಕೆ ಟಿಕೆಟ್ ತೆಗೆದುಕೊಳ್ಳಬೇಕು ಎಂದಿದ್ದಾರೆ. ಅಲ್ಲದೆ, ಮೊಬೈಲ್ ನಲ್ಲಿ ವಿಡಿಯೋ ಮಾಡಿ ಕಂಡಕ್ಟರ್ ಗೆ ಧಮ್ಕಿ ಹಾಕಿದ್ದಾರೆ. ಲೇಡಿ ಗಲಾಟೆ ಕಂಡು ಬಸ್ ನಲ್ಲಿದ್ದ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ.

ಇದನ್ನೂ ಓದಿ : ನಗ್ನ ವಿಡಿಯೋ ಕಾಲ್ ಮೂಲಕ ರಾಜ್ಯ ಬಿಜೆಪಿ ಸಂಸದರಿಗೆ ಬ್ಲ್ಯಾಕ್ ಮೇಲ್!

ಸಹ ಪ್ರಯಾಣಿಕರಿಗೂ ಲೇಡಿ ಅವಾಜ್

ಈ ವೇಳೆ ಟಿಕೆಟ್ ತಗೊಳ್ಳಿ ಎಂದ ಸಹ ಪ್ರಯಾಣಿಕರಿಗೂ ಲೇಡಿ ಅವಾಜ್ ಹಾಕಿದ್ದಾರೆ. ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ಫೋಟೋ ಇದೆ ಅಂತ ತೋರಿಸಿ, ಇದನ್ನು ನೋಡಿ ಟಿಕೆಟ್‌ ಕೊಡಿ ಅಂತ ಕೇಳಿದ್ದಾರೆ. ಆಗ ಕಂಡಕ್ಟರ್, ಮೊಬೈಲ್ ನಲ್ಲಿ ಡಿಜಿ ಲಾಕರ್‌ನಲ್ಲಿರುವ ಫೋಟೋ ತೋರಿಸಿ, ಇಲ್ಲವಾದಲ್ಲಿ ಮೂಲ ದಾಖಲೆಯ ಜೆರಾಕ್ಸ್‌ ಪ್ರತಿ ತೋರಿಸಿ ಎಂದಿದ್ದಾರೆ. ಅದಕ್ಕೂ ಜಗ್ಗದ ಲೇಡಿ ತನ್ನ ವಾದ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES