ಶಿವಮೊಗ್ಗ : ಅರ್ಧ ಹೆಲ್ಮೆಟ್ ಹಾಕಿ ಬೈಕ್ ಓಡಿಸುವ ಸವಾರರಿಗೆ ನಾಳೆಯಿಂದ ದಂಡ ಹಾಕುವುದಾಗಿ ಎಚ್ಚರಿಕೆ ಮೂಡಿಸುತ್ತಿರುವ ಟ್ರಾಫಿಕ್ ಪೋಲಿಸರು, ಶಿವಮೊಗ್ಗದ ಹುಲಿಕೆರೆ ಶಾಂತಪ್ಪ ವೃತ್ತದ ಟ್ರಾಫಿಕ್ ನಲ್ಲಿ ಕಾರ್ಯಚರಣೆ ನೆಡೆಸುತ್ತಿರುವ ಇನ್ಸ್ಪೆಕ್ಟರ್ ಸಂತೋಷ್.
ಕೆಲ ಜನರು ಹೆಲ್ಮೆಟ್ ಹಾಕಿದರು ಅದನ್ನ ಸರಿಯಾಗಿ ಹಾಕದೆ ಅರ್ಧ ಹೆಲ್ಮೆಟ್ ಹಾಕಿ ವಾಹನಗಳನ್ನು ಓಡಿಸಲು ಶುರುಮಾಡಿಕೊಂಡಿದ್ದಾರೆ. ಬೈಕ್ ಸವಾರರಿಗೆ ಹೆಲ್ಮೆಟ್ ಹಾಕಿ ವಾಹನಗಳನ್ನು ಓಡಿಸಿ ಎಂದರೆ ಎಷ್ಡೋ ಜನ ನಿಯಮ ಉಲ್ಲಂಘನೆ ಮಾಡುವವರು ಈಗಲು ಇದ್ದಾರೆ. ಆದ್ದರಿಂದ ಸಂಚಾರಿ ಪೋಲಿಸರು ಅರ್ಧ ಹೆಲ್ಮೆಟ್ ಹಾಕಿಕೊಂಡು ಬರುತ್ತಿದ್ದ ಸವಾರರನ್ನು ಅಡ್ಡ ಹಾಕಿ ವಾಹನ ಸವಾರರಿಂದ ಹೆಲ್ಮೆಟ್ ನ್ನು ವಶಕ್ಕೆ ಪಡೆದುಕೊಂಡಿರುವ ಪೋಲಿಸರು.
ಬಳಿಕ ಹೆಲ್ಮೆಟ್ ಕೊಟ್ಟು ಪೋಲಿಸರಿಗೆ ಹಿಡಿಶಾಪ ಹಾಕುತ್ತ, ಮಳೆಯಲ್ಲಿ ತೋಯ್ದುಕೊಂಡೆ ಸಾಗಿದ ವಾಹನ ಸವಾರರು. ಶಿವಮೊಗ್ಗದ ಹುಲಿಕೆರೆ ಶಾಂತಪ್ಪ ವೃತ್ತದಲ್ಲಿ ಘಟನೆ.
ಇದನ್ನು ಓದಿ : ಸುಬ್ರಹ್ಮಣ್ಯ ರಸ್ತೆ ಸಂಪೂರ್ಣ ಬಂದ್, ಶಾಲೆಗಳಿಗೆ ರಜೆ ಘೋಷಣೆ
ಸರ್ಕಲ್ ನಲ್ಲಿ ರಾಶಿ, ರಾಶಿ ಅರ್ಧ ಹೆಲ್ಮೆಟ್ ಗಳು
ಟ್ರಾಫಿಕ್ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಕಾರ್ಯಾಚರಣೆ ನೆಡೆಯುತ್ತಿದ್ದು, ಹೆಲ್ಮೆಟ್ ಗಳನ್ನು ವಶಕ್ಕೆ ಪಡೆದು ಸವಾರರಿಗೆ ಅರ್ಧ ಹೆಲ್ಮೆಟ್ ಅಪಾಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಿದರು. ಅಷ್ಟೇ ಅಲ್ಲದೆ ನಾಳೆಯಿಂದ ಅರ್ಧ ಹೆಲ್ಮೆಟ್ ಹಾಕಿಕೊಂಡು ಬಂದವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆಯನ್ನು ಕೊಟ್ಟು ಅವರಲ್ಲಿ ಹೆಚ್ಚಿನ ಜಾಗೃತಿಯನ್ನು ಮೂಡಿಸಿದ ಟ್ರಾಫಿಕ್ ಪೋಲಿಸರು.