Sunday, November 3, 2024

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಲಿ ಅನ್ನೋದು ತಪ್ಪೇನಲ್ಲ : ಬಸವರಾಜ್ ರಾಯರೆಡ್ಡಿ

ವಿಜಯನಗರ : ಸಿದ್ದರಾಮಯ್ಯ 5 ವರ್ಷಗಳ ಕಾಲ ಪೂರ್ಣಾವಧಿ ಸಿಎಂ ಆಗಿರಲಿ ಅನ್ನೋದು ತಪ್ಪೇನಲ್ಲ ಎಂದು ಸಿದ್ದರಾಮಯ್ಯ ಪರ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಬ್ಯಾಟ್ ಬೀಸಿದರು.

ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯ ಒನ್ ಆಫ್ ದಿ ಬೆಸ್ಟ್ ಸಿಂ ಇನ್ ಇಂಡಿಯಾ ಇನ್ ಪ್ರೆಸೆಂಟ್ (Siddaramaiah One of The Best CM in INDIA In Present) ಎಂದರು.

ನಾನು ಬಹಳ ಸ್ಟೇಟ್ ಫ್ರಾಂಕ್ ಮ್ಯಾನ್. ಸಿದ್ದರಾಮಯ್ಯ 5 ವರ್ಷ ಮುಂದುವರೆಯೋದು ಅಂತ ಕೆಲವರು ಹೇಳ್ತಾರೆ. ಡಿ.ಕೆ ಶಿವಕುಮಾರ್ ಸಿಎಂ ಆಗಲಿ ಅಂತ ಕೆಲವರು ಹೇಳ್ತಾರೆ. ವಿರೋಧ ಪಕ್ಷದವರು ಟೀಕೆ ಮಾಡ್ತಾರೆ, ಮಾಡಲಿ. ಅವರದ್ದು ಅದೇ ಕೆಲಸ, ಹೊರತು ಬೇರೆನೂ ಅಲ್ಲ. ನನಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಂತ ನನಗೆ ಅಸಮಾಧಾನವಿಲ್ಲ. ಸಮನ್ವಯದ ಕೊರತೆಯಿದೆ, ಸರಿಯಾಗಲಿ ಅನ್ನೋದು ನಮ್ಮ ಆಶಯ ಎಂದು ಹೇಳಿದರು.

ಆ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ

ಅಭಿವೃದ್ಧಿ ವಿಚಾರದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಅಂತ ಆಳಂದ ಶಾಸಕರು ಬಿ.ಆರ್. ಪಾಟೀಲ್ ಮತ್ತು ಕೆಲವರು ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ನಾನು ಸಹಿ ಹಾಕಿದ್ದೇನೆ, ಅದರಲ್ಲಿ ತಪ್ಪೇನು ಇಲ್ಲ. ಕೆಲವೊಂದು ಕಮ್ಯೂನಿಕೇಷನ್ ಗ್ಯಾಪ್ ಇದೆ. ಈ ವಿಚಾರವಾಗಿ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅಂತ ಹೇಳಿದ್ದಾರೆ ಅಷ್ಟೇ. ಇದು ನಮಗೆ ಅಸಮಾಧಾನ ಅಂತ ಅನಿಸೋಲ್ಲ ಎಂದು ಡ್ಯಾಮೇಜ್ ಕಂಟ್ರೋಲ್ ಹೇಳಿಕೆ ನೀಡಿದರು.

ಇದನ್ನೂ ಓದಿ : ಕಾಂಗ್ರೆಸ್​ ಶಾಸಕರಿಗೆ ಗಾಳ ಹಾಕ್ತಿರುತ್ತಾರೆ : ಮತ್ತೊಂದು ಬಾಂಬ್ ಸಿಡಿಸಿದ ಡಿಕೆಶಿ

ಸರ್ಕಾರ ಈಗ ತಾನೇ ರಚನೆಯಾಗಿದೆ

ವೈಯುಕ್ತಿಕವಾಗಿ ನಮಗೆ ಯಾವುದೇ ರೀತಿಯಲ್ಲಿ ಅಸಮಾಧಾನವಿಲ್ಲ. ಕೆಲವರು ಹೊಸ ಶಾಸಕರಾಗಿದ್ದಾರೆ. ಸಚಿವರಾಗಿದ್ದಾರೆ. ಸಂಪರ್ಕ ಸಂಬಂಧ ಸಭೆ ಕರೆಯಿರಿ ಅಂತ ಹೇಳಿದ್ದಾರೆ. ಸಿಎಂ ಸಭೆ ಕರೆಯೋಕೆ ಒಪ್ಪಿದ್ದಾರೆ. ಸದ್ಯ ಸರ್ಕಾರವೂ ಯಾವುದೇ ರೀತಿಯಲ್ಲಿ ಸಮಸ್ಯೆಯಿಲ್ಲದೇ ನಡೆಯುತ್ತಿದೆ. ಸರ್ಕಾರ ಈಗ ತಾನೇ ರಚನೆಯಾಗಿದೆ. ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ ಎಂದರು.

ಯಾವ ವೈರಿಯೂ ಕೂಡ ಮೆಚ್ಚಲ್ಲ

ಸಿದ್ದರಾಮಯ್ಯ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುತ್ತಿಲ್ಲ ಅಂದ್ರೆ, ಯಾವ ವೈರಿಯೂ ಕೂಡ ಮೆಚ್ಚಲ್ಲ. ವೈಯುಕ್ತಿಕ, ಆಸೆ ಆಮಿಷಗಳು ಬೇರೆ. ಕೆಲಸದಲ್ಲಿ ಬೆಸ್ಟ್ ಗೌರ್ನಮೆಂಟ್ ಇನ್ ದಿ ಇಂಡಿಯಾ. ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಅಂತ ಶಾಸಕರ ಒತ್ತಾಯ ಬಹಳ ಇತ್ತು. ನಾನು ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಅಂತ ಹೇಳಿದವನಲ್ಲ. ಆಳಂದ ಶಾಸಕರು ಕೇಳಿದ್ದಾರೆ, ನಾನು ಸಹಿ ಮಾಡಿದ್ದೇನೆ. ಸರ್ಕಾರ ಹಾಗೂ ಶಾಸಕಾಂಗದ ನಡುವೆ ಸೌಹಾರ್ದತೆ ಇರಲಿ ಅಂತ ಹೇಳಿದ್ದಾರೆ, ಅದ್ರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.

RELATED ARTICLES

Related Articles

TRENDING ARTICLES