Monday, December 23, 2024

ರೈಲಿಗೆ ತಲೆ ಕೊಟ್ಟು ನಿವೃತ್ತ ಉಪನ್ಯಾಸಕ ಆತ್ಮಹತ್ಯೆ

ಶಿವಮೊಗ್ಗ : ನಿವೃತ್ತ ಉಪನ್ಯಾಸಕರೊಬ್ಬರು ವಿನೋಬನಗರ ಸಮೀಪದ ರೈಲ್ವೆ ಟ್ರ್ಯಾಕ್ ಬಳಿ ತಾಳಗುಪ್ಪ ಟ್ರೈನ್​ಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಡಿವಿಎಸ್​ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ವಿಶ್ವನಾಥ್ (70) ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ. ಸಾಲದಿಂದ ಬೇಸತ್ತು ರೈಲಿಗೆ ತಲೆವೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಡಿವಿಎಸ್ ಇಂಡಿಪೆಂಡೆಂಟ್ ಕಾಲೇಜಿನ ಫಿಸಿಕಲ್ ಡೈರೆಕ್ಟರ್ ಆಗಿದ್ದ ವಿಶ್ವನಾಥ್ ಅವರು 2013ರಲ್ಲಿ ಉಪನ್ಯಾಸಕ ಹುದ್ದೆಯಿಂದ ನಿವೃತ್ತರಾಗಿದ್ದರು. ವಿಶ್ವನಾಥ್ ಅವರು ಬೆಂಗಳೂರಿನ ಮಗನ ಮನೆಯಿಂದ ಕಳೆದೆರಡು ದಿನಗಳ ಹಿಂದೆ ವಾಪಸ್ಸಾಗಿದ್ದರು. ನಂತರ ಸಹೋದರಿಯೊಂದಿಗೆ ಬೇಸರದಿಂದ ಮಾತನಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಹೃದಯಾಘಾತದಿಂದ ಬ್ಯಾಂಕ್ ಉದ್ಯೋಗಿ ಸಾವು

ಇಂದು ಬೆಳಗ್ಗೆ ವಾಕಿಂಗ್‌ಗೆಂದು ಹೊರ ಹೋಗಿದ್ದ ವಿಶ್ವನಾಥ್, ತಾಳಗುಪ್ಪ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES