Sunday, January 19, 2025

ಶಾಸಕ ಶಿವಗಂಗಾ ಬಸವರಾಜ್​ಗೆ ಘೇರಾವ್ ಹಾಕಿದ ನಿರಾಶ್ರಿತರು

ದಾವಣಗೆರೆ : ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕ ಶಿವಗಂಗಾ ಬಸವರಾಜ್ ಅವರಿಗೆ ನಿರಾಶ್ರಿತರು ಘೇರಾವ್ ಹಾಕಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಸ್ವಗ್ರಾಮಾದ ಹಿರೇಕೋಗಲೂರು ಗ್ರಾಮಕ್ಕೆ ಭೇಟಿ ನೀಡಿ ವೇಳೆ ಚನ್ನಗಿರಿ ಕ್ಷೇತ್ರದ ಶಾಸಕ ಶಿವಗಂಗಾ ಬಸವರಾಜ್ ವಿರುದ್ಧ ನಿರಾಶ್ರಿತರು ಧಿಕ್ಕಾರ ಕೂಗಿದರು.

ಚುನಾವಣಾ ಪೂರ್ವದಲ್ಲಿ ನಿರಾಶ್ರಿತರಿಗೆ ನೀಡಿದ್ದ ಭರವಸೆಗಳನ್ನು ಇನ್ನು ಪೂರೈಸಿಲ್ಲ ಎಂದು ಶಾಸಕರ ಕಾರಿಗೆ ಅಡ್ಡಹಾಕಿ ಆಕ್ರೋಶ ಹೊರಹಾಕಿದರು.

ಇದನ್ನು ಓದಿ : ಈ ಸರ್ಕಾರ ಕೆಡವಲು 60 ಶಾಸಕರು ಬೇಕಾಗುತ್ತೆ : ಎಂ.ಬಿ ಪಾಟೀಲ್

ಸರ್ವೇ ನಂಬರ್ 46ರಲ್ಲಿ ಗುಡಿಸಲು ಹಾಕಿಕೊಂಡು ಜೀವನವನ್ನು ನೆಡೆಸುತ್ತಿದ್ದರು. ಆದರೆ, ನಿರಾಶ್ರಿತರಿಗೆಂದು ಮಂಜೂರು ಮಾಡಿದ್ದ ಜಾಗದಲ್ಲಿ ಗ್ರಾಮಸ್ಥರು 20 ಅಡಿಯಷ್ಟು ಗುಂಡಿಯನ್ನು ಹೊಡೆದು ಕೆರೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೀಗಾಗಿ, ದೇವರ ಜಮೀನಿನಲ್ಲೇ ನಿರಾಶ್ರಿತರು ಗುಡಿಸಲನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಈ ಸಮಸ್ಯೆ ಬಗ್ಗೆ ತಿಳಿಸಿದಾಗ ಸಮಸ್ಯೆ ಬಗೆಹರಿಸುವುದಾಗಿ ಜನರಿಗೆ ಶಾಸಕ  ಶಿವಗಂಗಾ ಬಸವರಾಜ್ ಮಾತನ್ನು ಕೊಟ್ಟಿದ್ದರು. ಇನ್ನು ಆ ವಿಷಯವನ್ನು ಬಗೆಹರಿಸಿಲ್ಲ ಎಂದು ಶಾಸಕರ ವಿರುದ್ದ ನಿರಾಶ್ರಿತರು ಪ್ರತಿಭಟನೆಗೆ ಮುಂದಾದರು.

ಸರ್ವೇ ನಂ.46ರಲ್ಲಿ ಜಾಗ ಕೊಡುತ್ತೇವೆ ಅಂದಿದ್ದರು. ಈಗ ಸ್ಮಶಾನದ ಪಕ್ಕದಲ್ಲಿರುವ ಸರ್ವೇ ನಂ.81ರಲ್ಲಿ ನಿವೇಶನ ಕೊಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ಆಕ್ರೋಶಕ್ಕೆ ಒಳಗಾದ ಜನರು, ಸ್ಮಶಾನದ ಪಕ್ಕದಲ್ಲಿ ನಿವೇಶನ ನೀಡಿದರೆ ನಾವು ಹೇಗೆ ಜೀವನ ಮಾಡುವುದು? ಎಂದು ಪ್ರಶ್ನಿಸಿದ್ದಾರೆ. ನಮಗೆ ಸರ್ವೇ ನಂ.46ರಲ್ಲಿ ಎಲ್ಲದರೂ ನೀವೆಶನ ನೀಡುವಂತೆ ಪಟ್ಟು ಹಿಡಿದಿದ್ದಾರೆ.

RELATED ARTICLES

Related Articles

TRENDING ARTICLES