Sunday, December 22, 2024

ಹಿಂದೂ ಹುಡುಗಿಯರ ನಗ್ನ ಶರೀರ ನೋಡಬಹುದಾ? : ರವಿಕುಮಾರ್ ಕಿಡಿ

ಬೆಂಗಳೂರು : ನಿಮ್ಮ ಮುಖ ಕಾಣಬಾರದು ಅಂತ ಹಿಜಾಬ್ ಬೇಕು ಅಂತೀರಿ. ಹಾಗಾದರೆ, ಹಿಂದೂ ಹುಡುಗಿಯರ ನಗ್ನ ಶರೀರ ನೋಡಬಹುದಾ? ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊನ್ನೆ ಹೇಳಿದ್ರು, ಸುಳ್ಳು ಸುದ್ದಿ ವಿರುದ್ಧ ಕ್ರಮ ಎಂದಿದ್ದೀರಿ. ಈಗ ಏನು ಹೇಳ್ತಿರಿ? ಎಂದಿದ್ದಾರೆ.

ಈ ಸುದ್ದಿ ಹರಡಬಾರದು ಅಂತ ಕಾಂಗ್ರೆಸ್ ಸರ್ಕಾರ ಹೇಳಿದೆ. ಈಗ ವಿಡಿಯೋ ಹರಿಬಿಟ್ಟಿದ್ದಕ್ಕೆ ಏನು ಕ್ರಮ ಮಾಡ್ತೀರಿ? ಪ್ರಿಯಾಂಕ ಖರ್ಗೆ ಭಾರಿ ಮಾತನಾಡಿದ್ದಾರೆ. ನಿಮ್ಮ ಸದುದ್ದೇಶ ಸರಿ. ಆದರೆ, ವಿದ್ಯಾರ್ಥಿನಿಯರ ವಿಡಿಯೋ ಹರಿಬಿಟ್ಟವರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಿ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಡಿಕೆಶಿ ಹೇಳಿಕೆಗಳಿಂದಲೇ ಸರ್ಕಾರದಲ್ಲಿ ಅಸ್ಥಿರತೆ : ಬಸವರಾಜ ಬೊಮ್ಮಾಯಿ

ಜು.27ರಂದು ರಾಜ್ಯಾದ್ಯಂತ ಹೋರಾಟ

ಅಲ್ಟ್ ನ್ಯೂಸ್ ಬಗ್ಗೆ ಏನು ಕ್ರಮ? ಇದು ಫೇಕ್ ನ್ಯೂಸ್ ಹಬ್ಬಿಸ್ತಾ ಇದೆ. ಜುಲೈ 27ರಂದು ಬಿಜೆಪಿ ಮಹಿಳಾ ಮೋರ್ಚಾ ಕಡೆಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ. ಆ ಮೂವರು ವಿದ್ಯಾರ್ಥಿನಿಯರನ್ನು ಬಂಧಿಸಬೇಕು. ಜೊತೆಗೆ ರಶ್ಮಿ ಸಾವಂತ್​ಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES