Thursday, September 19, 2024

ಅಕ್ರಮ ಸಂಬಂಧ: ಜೆಡಿಎಸ್ ಮುಖಂಡನಿಗೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ!

ಕಲಬುರಗಿ : ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಜೆ ಡಿ ಎಸ್ ಮುಖಂಡನಿಗೆ  ಏರಿಯಾದ ಜನರೇ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಐನೊಳ್ಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ!

ಕಲಬುರಗಿ ಜಿಲ್ಲಾ ಜೆ.ಡಿ.ಎಸ್ ಮುಖಂಡ ವಿಷ್ಣುಕಾಂತ ಮೂಲಗಿ ಥಳಿತಕ್ಕೆ ಒಳಗಾದ ವ್ಯಕ್ತಿ, ಐನೊಳ್ಳಿ ಗ್ರಾಮದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದದ್ದರು, ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ಹಣದ ಆಮಿಷ ಒಡ್ಡಿದ ವಿಷ್ಣುಕಾಂತ ಆಕೆಯನ್ನು ಮನೆಗೆ ಕರೆಸಿಕೊಂಡಿದ್ದ,

ವಿಷ್ಣುಕಾಂತನ ಅನೈತಿಕ ಸಂಬಂಧದಿಂದ ಬೇಸತ್ತ ಜನರು ಏರಿಯಾದ ಮರ್ಯಾದೆ ಹಾಳಾಗುತ್ತಿದ್ದಾನೆ ಎಂದು ಸ್ಥಳೀಯರೇ ಥಳಿಸಿದ್ದಾರೆ. ಜೆ.ಡಿ.ಎಸ್ ಮುಖಂಡನಿಗೆ ಗೂಸಾ ಬಿದ್ದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ, ಈ ಪ್ರಕರಣವು ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES