ದಾವಣಗೆರೆ : ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೇಲೆ ತುಂಗಾಭದ್ರಾ ಹೊಳೆಯ ನೀರಿನ ಹರಿವು ಹೆಚ್ಚಾಗಿದ್ದು ನೀರಿನಲ್ಲಿ ತೇಲಿ ಬಂದ ಮೃತದೇಹ.
ಖಾಲಿ ಖಾಲಿ ಇದ್ದ ನದಿ ಈಗ ಮೈತುಂಬಿ ಹರಿಯುತ್ತಿರುವ ದಾವಣಗೆರೆ ಜಿಲ್ಲೆಯ ಹರಿಹರದ ತುಂಗಾಭದ್ರಾ ನದಿ. ಕೇವಲ ತುಂಗಾ ನದಿಯ ನೀರು ಹೊರ ಬಿಟ್ಟ ಹಿನ್ನಲೆ ತುಂಬಿ ಹರಿಯುತ್ತಿರುವ ಹೊಳೆ, ಇಂದು ನೀರಿನ ಹರಿವು ಜಾಸ್ತಿ ಇರುವುದರಿಂದ ನೀರಿನಲ್ಲಿ ತೇಲಿ ಬಂದ ಒರ್ವ ಪುರುಷನ ಮೃತದೇಹ, ಹರಿಹರ ನಗರದ ರಾಘವೇಂದ್ರ ಮಠದ ಬಳಿ ಘಟನೆ.
ಇದನ್ನು ಓದಿ : ಹಾವೇರಿ ಜಿಲ್ಲೆಯಾದ್ಯಂತ ವರುಣನ ಅರ್ಭಟ, ಮುಳುಗಡೆಯಾದ ವರದ ಸೇತುವೆ
ಆಕಸ್ಮಿಕವಾಗಿ ನದಿಯಲ್ಲಿ ಬಿದ್ದಿರುವ ಶಂಕೆ
ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆ ಕಂಡು ಬಂದ ಮೃತದೇಹ, ಆಕಸ್ಮಿಕವಾಗಿ ಬಿದ್ದಿರಬಹುದು ಎಂಬ ಸಂಶಯ ಇದೆ. ಭದ್ರ ನದಿಯ ನೀರು ಹೊರ ಬಿಟ್ಟರೆ ಇನ್ನು ಹೆಚ್ಚಾಗಲಿರುವ ನೀರಿನ ಮಟ್ಟ, ಅದರಿಂದ ತುಂಬಿ ಹರಿಯುತ್ತಿರುವ ನದಿಯನ್ನು ನೋಡಲು ಆಗಮಿಸುತ್ತಿರುವ ಜನರು.
ಅದರಿಂದ ಮುಂಜಾಗ್ರತೆ ವಹಿಸಿರುವ ಜಿಲ್ಲಾಡಳಿತ ಹಾಗೂ ತಾಲ್ಲೂಕು ಅಡಳಿತ.