Thursday, December 19, 2024

ಸಿದ್ದರಾಮಯ್ಯ ನಮ್ಮನ್ನ ಹೊಗಳೋಕೆ ಆಗುತ್ತಾ? : ಎ.ಟಿ ರಾಮಸ್ವಾಮಿ ತಿರುಗೇಟು

ಹಾಸನ : ಬಿಜೆಪಿಯವರದ್ದು ಗೂಡ್ಸೆ ಮನಸ್ಥಿತಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರುವ ಮಾಜಿ ಶಾಸಕ ಎ.ಟಿ ರಾಮಸ್ವಾಮಿ ತಿರುಗೇಟು ಕೊಟ್ಟರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರು ನಮ್ಮನ್ನು ತೆಗಳಬೇಕಲ್ಲವೇ, ಹೊಗಳಲು ಆಗುತ್ತಾ? ಎಂದು ಕುಟುಕಿದರು.

ನಮಗೆ ಇರೋವುದು ಒಂದೇ ಭೂಮಿ. ಒಂದೇ ಭೂಮಿತಾಯಿ, ಭಾರತಮಾತೆ. ಅದರ ಮಕ್ಕಳು ನಾವು. ಒಬ್ಬರ ಮೇಲೋಬ್ಬರು ಕೆಸರೆರಚಾಟ ಆಡುವಂತಹ ಜಾಯಮಾನ ಈಗ ಹೆಚ್ಚಾಗಿದೆ. ಆ ಕಡೆ ಕೂತಾಗ ಒಂದು ಮಾತನ್ನು ಆಡ್ತಾರೆ, ಈ ಕಡೆ ಕೂತಾಗ ಮತ್ತೊಂದು ಮಾತನ್ನಾಡುತ್ತಾರೆ ಎಂದು ಚಾಟಿ ಬೀಸಿದರು.

ಇದನ್ನೂ ಓದಿ : ಗಾಂಧಿ ಕೊಂದವರು ಗಾಂಧಿ ಮುಂದೆ ಪ್ರತಿಭಟನೆ ಮಾಡ್ತಿದ್ದಾರೆ : ಸಿದ್ದರಾಮಯ್ಯ

ಪ್ರಚಾರಕ್ಕಾಗಿ‌ ಮಾಡ್ತಿರೋ ಗಿಮಿಕ್

ಬೆಲೆ ಏರಿಕೆಯ ವಿರುದ್ಧ ಅವರು ಚುನಾವಣೆಯಲ್ಲಿ ಬಹಳವಾಗಿ‌ ಮಾತಾಡಿದ್ರು. ಇವತ್ತು ಬೆಲೆಗಳು ಕುಸಿದಿದ್ದಾವಾ? ಗಗನಕ್ಕೆ ಹೋಗ್ತಾ ಇದ್ದಾವೆ. ಉಚಿತ ಗ್ಯಾರಂಟಿಗಳನ್ನು ಕೊಟ್ರು. ಗ್ಯಾರಂಟಿಗೆ ಎಲ್ಲಿಂದ ದುಡ್ಡು ಬರ್ತಾ ಇದೆ? ಈ ಕಡೆಯಿಂದ ಬಡವರಿಂದಲೇ ಕಿತ್ಕೊಂಡು, ಮತ್ತೆ ಬಡವರಿಗೇ ಕೊಟ್ಟಿದ್ದೇವೆ ಅಂತ ಜನಪ್ರಿಯತೆಗಾಗಿ, ಪ್ರಚಾರಕ್ಕಾಗಿ‌ ಮಾಡ್ತಿರೋ ಗಿಮಿಕ್ ಇದು ಎಂದು ಗುಡುಗಿದರು.

ಲಾಭ ಮಾಡಿಕೊಳ್ಳುವುದೇ ರಾಜನೀತಿ

ಹೃದಯಾಂತರಾಳದಿಂದ ಬಡವರ ಪರವಾಗಿ ಕೆಲಸ ಮಾಡ್ತಾ ಇಲ್ಲ. ಕೆಲವು ನಾಯಕರು ಬಡವರ, ಶೋಷಿತರ, ತುಳಿತಕ್ಕೆ ಒಳಗಾಗಿರುವವ ಪರವಾಗಿ ಇದ್ದೇವೆ ಅಂತ ಹೇಳ್ತಾರೆ. ಅವರ ಸೇವೆ ಮಾಡೋದಕ್ಕೆ ಬಂದಿದ್ದೇವೆ ಅಂತ ಹೇಳ್ತಾರೆ. ಆದ್ರೆ, ಬಂಡವಾಳಶಾಹಿಗಳ ಜೊತೆ ಸೇರಿಕೊಂಡು ಲಾಭ ಮಾಡಿಕೊಳ್ಳುವುದೇ ಅವರ ರಾಜನೀತಿ, ಪ್ರಜಾಪ್ರಭುತ್ವದ ನೀತಿ ಅಂತೇಳಿ ಅಂದುಕೊಂಡಿರೋದು ಒಳ್ಳೆಯ ಗುಣಗಳಲ್ಲ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES