ಮಂಡ್ಯ : ದೇವೇಗೌಡರ ಪಕ್ಷದಲ್ಲಿ ದೇವೇಗೌಡರ ಮಾತಿಗೆ ಕಿಮ್ಮತ್ತಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕುಟುಕಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರ ಆಫೀಸ್ ಗೆ ಕುಮಾರಸ್ವಾಮಿ ಹೋಗಿದ್ದಾರೆ. ಅಂದ್ರೆ ದೇವೇಗೌಡರ ಮಾತಿಗೆ ಕಿಮ್ಮತ್ತಿಲ್ಲ ಅಂತ ಅರ್ಥ ಎಂದು ಟೀಕಿಸಿದರು.
ಹೊಂದಾಣಿಕೆ ಸಂಬಂಧ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ದ್ವಂದ್ವ ನಿಲುವು ವಿಚಾರವಾಗಿ ಮಾತನಾಡಿ, ದೇವೇಗೌಡ್ರು ಇದುವರೆಗೂ ಪಕ್ಷವನ್ನು ಇನ್ನೊಂದು ಪಕ್ಷದೊಂದಿಗೆ ವಿಲೀನ ಮಾಡುವ ನಿರ್ಧಾರ ತಕೊಂಡಿಲ್ಲ. 10 ಗೆಲ್ಲಲಿ, 3 ಗೆಲ್ಲಲಿ, 50 ಗೆಲ್ಲಲಿ ಹೋರಾಟ ಮಾಡ್ಕೊಂಡು ಬಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಹಾಲಿನ ದರ ಏರಿಕೆ : ಸರ್ಕಾರದ ವಿರುದ್ದ ಹೆಚ್ಡಿ ಕುಮಾರಸ್ವಾಮಿ ಆಕ್ರೋಶ
ಇಬ್ಬರು ಸೇರುತ್ತಿದ್ದಾರೆ, ನೋಡೋಣ
ಇವತ್ತು ಕಟ್ಟಿಬೆಳೆಸಿದ ಪಕ್ಷವನ್ನು ದೇವೇಗೌಡರಿಂದಲೇ ಬೇರೆ ಪಕ್ಷಕ್ಕೆ ಕೊಡ್ತಿದ್ದಾರೆ ಎಂದರೇ ಕೊಡಲಿ. ಅದು ಅವರ ಪಕ್ಷದ ತೀರ್ಮಾನ, ನಾವ್ಯಾಕೆ ಬೇಡ ಎನ್ನಲಿ. ಒಬ್ಬರು ಪೈಪೋಟಿ ಕೊಡಲು ಆಗಲ್ಲ ಅಂತ ಇಬ್ಬರು ಸೇರುತ್ತಿದ್ದಾರೆ. ನೋಡೋಣ.. ಜನರು ಅದರ ಬಗ್ಗೆ ತೀರ್ಮಾನ ಮಾಡ್ತಾರೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಅವ್ರನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ
ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡದೆ ತುಳಿದಿದ್ದಾರೆ ಎಂಬ ಪ್ರಣಾವಾನಂದ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಮಾತನಾಡಿ, ರಾಜ್ಯಸಭಾ ಸದಸ್ಯಾರಾಗಿ, ವಿವಿಧ ರಾಜ್ಯಗಳ ಉಸ್ತುವಾರಿಯಾಗಿ ಮಾಡಿ ಕಾಂಗ್ರೆಸ್ ಗೌರವವಾಗಿ ನಡೆದುಕೊಂಡಿದೆ. ವಿಧಾನಪರಿಷತ್ ಸದಸ್ಯರಾಗಿ ಮಾಡಿದೆ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಮುಂದೆಯು ಗೌರವವಾಗಿಯೇ ನಡೆಸಿಕೊಳ್ಳುತ್ತೆ ಎಂದರು.