ಹಾಸನ : ಹಲವು ವರ್ಷಗಳಿಂದ ಸ್ಮಶಾನ ಭೂಮಿಗಾಗಿ ಹೋರಾಟ ಮಾಡಿದರೂ ಭೂಮಿ ಮಂಜೂರು ಮಾಡದೆ ಇರುವ ಕಾರಣ ಮನೆಯ ಮುಂದೆಯೇ ಶವ ಹೂಳಲು ಕುಟುಂಬವೊಂದು ಮೂಂದಾದ ಘಟನೆ ಹಾಸನದಲ್ಲಿ ನಡೆದಿದೆ.
ಜಿಲ್ಲೆಯ ಅರಕಲಗೂಡು ತಾಲೂಕಿನ ಶಂಭುನಾಥಪುರದಲ್ಲಿ ಈ ಘಟನೆ ನಡೆದಿದೆ. ಶಂಭುನಾಥಪುರದ ಮೃತ ಗಿಡ್ಡಯ್ಯ (54) ಎಂಬುವವರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಆದರೆ, ಹಲವು ವರ್ಷಗಳಿಂದ ಸ್ಮಶಾನ ಭೂಮಿಗಾಗಿ ದಲಿತ ಸಮುದಾಯ ಹೋರಾಟ ನೆಡೆಸಿತ್ದತು.
ದಲಿತ ಸಮುದಾಯಕ್ಕೆ ಈವರೆಗೂ ಸ್ಮಶಾನ ಮಂಜೂರು ಮಾಡಿರಲಿಲ್ಲ. ಈ ಕಾರಣ ಮೃತ ಗಿಡ್ಡಯ್ಯರ ಅಂತ್ಯ ಸಂಸ್ಕಾರವನ್ನು ಮನೆಯ ಮುಂದೆಯೇ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು.
ಇದನ್ನು ಓದಿ : ‘ಗೃಹಲಕ್ಷ್ಮೀ’ ಅರ್ಜಿ ಭರ್ತಿಗೆ ಹಣ ವಸೂಲಿ! : ಪವರ್ ಟಿವಿಗೆ ವಿಡಿಯೋ ಲಭ್ಯ
ಸ್ಮಶಾನ ಭೂಮಿ ಇಲ್ಲದಿರುವ ಹಿನ್ನಲೆ ಮನೆಯ ಮುಂದಯೇ ಗುಂಡಿ ತೆಗೆದು ಹೂಳಲು ಮುಂದಾಗಿದ್ದರು. ಬಳಿಕ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ದೌಡಯಿಸಿ, ಮನೆಯ ಮುಂದೆ ನೆಡೆಯುತ್ತಿದ್ದ ಅಂತ್ಯ ಸಂಸ್ಕಾರವನ್ನು ತಡೆದಿದ್ದಾರೆ. ಸರ್ಕಾರಿ ಜಾಗದಲ್ಲಿ ಸಂಸ್ಕಾರ ನಡೆಸಲು ಅಧಿಕಾಎಇ ಅವಕಾಶ ಮಾಡಿಕೊಟ್ಟ ಅಧಿಕಾರಿಗಳು.