Sunday, January 12, 2025

ತಿಮ್ಮಪ್ಪನ ಭಕ್ತಾಧಿಗಳಿಗೆ ತಿರುಪತಿ ಮಾದರಿ ಅನ್ನ ಪ್ರಸಾದ

ಬೆಂಗಳೂರು : ಎಷ್ಟೋ ಭಕ್ತಾದಿಗಳಿಗೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಲು ಆಗುವುದಿಲ್ಲ. ಅಂತವರಿಗೆ ಬೆಂಗಳೂರಿನ ವೈಯ್ಯಲಿಕಾವಲ್ ನಲ್ಲಿರುವ ಟಿಟಿಡಿಯು ಒಂದೊಳ್ಳೆ ಅವಕಾಶ ನೀಡಿದೆ.

ತಿಮ್ಮಪ್ಪನ ದರ್ಶನದ ಭಾಗ್ಯ ದೊರೆತ ಹಾಗೇ ಭಕ್ತಾದಿಗಳಿಗೆ ದೇವರ ದರ್ಶನ ಸಿಗುತ್ತಿದ್ದು, ತಿಮ್ಮಪ್ಪನ ಕೃಪೆಗೆ ಭಾಜನರಾಗುತ್ತಿದ್ದಾರೆ. ಇನ್ನೂ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ವಿಶೇಷವಾಗಿ ತಿರುಪತಿಯ ರೀತಿಯಲ್ಲೇ ಅನ್ನ ಪ್ರಸಾದ ನೀಡುತ್ತಿದೆ.

ವಾರದ 5 ದಿನ ಪ್ರಸಾದ

ಜೂನ್ 14ರಿಂದ ದೇವಸ್ಥಾನದಲ್ಲಿ ಅನ್ನದಾನ ಶುರುವಾಗಿದ್ದು, ಮೊದಲಿಗೆ ಕೇವಲ ಬುಧವಾರ ಮಾತ್ರ ಭಕ್ತಾದಿಗಳಿಗೆ ಅನ್ನ ಪ್ರಸಾದ ನೀಡಲಾಗುತಿತ್ತು. ಆದರೆ, ದಿನ ಕಳೆದಂತೆ ಈಗ ವಾರದ 5 ದಿನವು ಭಕ್ತಾದಿಗಳಿಗೆ ಅನ್ನ ಪ್ರಸಾದ ನೀಡುತ್ತಿದ್ದು, ಪ್ರತಿನಿತ್ಯ ಸುಮಾರು 5೦೦ಕ್ಕೂ ಹೆಚ್ಚು ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿ ತೃಪ್ತರಾದರು.

ಒಟ್ನಲ್ಲಿ, ಬರುವ ಭಕ್ತಾದಿಗಳಿಗೆ ಟಿಟಿಡಿಯು ಅನ್ನ ಪ್ರಸಾದ ನೀಡುತ್ತಿದ್ದು, ದಾನಿಗಳು ಇದ್ದರೆ ಅನ್ನದಾನಕ್ಕೆ ಧನ ಸಹಾಯ ಮಾಡಿ ಮತ್ತಷ್ಟು ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯ ಭಾಗ್ಯ ಸಿಗಲಿ ಎಂಬುದೇ ನಮ್ಮ ಆಶಯ.

RELATED ARTICLES

Related Articles

TRENDING ARTICLES