Wednesday, January 22, 2025

ಶಾರ್ಟ್​ ಸರ್ಕ್ಯೂಟ್ : ಸಜೀವ ದಹನ ಹೊಂದಿದ ಜಾನುವಾರುಗಳು

ವಿಜಯನಗರ : ವಿದ್ಯುತ್ ಶಾರ್ಟ್​ ಸರ್ಕ್ಯೂಟ್ ನಿಂದ ರಾಸುಗಳು ಸಜೀವ ದಹನವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಪ್ಪಾರಗೇರಿ ಗ್ರಾಮದಲ್ಲಿ ನಡೆದಿದೆ.

ಉಪ್ಪಾರಗೇರಿಯ ಗೌಳಿ ಬಸಪ್ಪ ಎಂಬುವವರಿಗೆ ಸೇರಿದ ಮೆಕ್ಕೆಜೋಳದ ಮೇವು ಶೆಡ್ ನಲ್ಲಿ ಅವಘಡ ಸಂಭವಿಸಿದೆ. ಪರಿಣಾಮ ಶೆಡ್ ನಲ್ಲಿದ್ದ ಆರು ಎಮ್ಮೆಗಳು, ಎರಡು ಆಕಳು, ಮೂರರಿಂದ ನಾಲ್ಕು ಕರುಗಳು ಸಜೀವ ದಹನವಾಗಿವೆ.

ಗೌಳಿ ಬಸಪ್ಪ ಮೇವು ಶೇಡ್ ನಲ್ಲಿ ರಾಸುಗಳನ್ನು ಕಟ್ಟಿದ್ದರು. ರಾತ್ರಿ ಜಿಟಿ-ಜಿಟಿ ಮಳೆ ಸುರಿಯುತ್ತಿತ್ತು. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಬಿಗಿಯಾಗಿ ಕಟ್ಟಿದ್ದರಿಂದ ರಾಸುಗಳು ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿವೆ.

ಇದನ್ನು ಓದಿ : ಹಿಂದೂಗಳಿಗೆ ಜಯ, ಜ್ಞಾನವಾಪಿ ಮಸೀದಿ ಸರ್ವೆಗೆ ಕೋರ್ಟ್ ಅನುಮತಿ

ರಾತ್ರಿ ವೇಳೆ ಘಟನೆ ಸಂಭವಿಸಿರುವುದರಿಂದ ರೈತ ಗೌಳಿ ಬಸಪ್ಪನವರಿಗೆ ಮಾಹಿತಿ ತಿಳಿದಿರಲಿಲ್ಲ. ಮುಂಜಾನೆ ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಅಂದಾಜು 5 ಲಕ್ಷ ನಷ್ಟ ಸಂಭವಿಸಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪ್ರಗತಿಪರ ರೈತ ಆಲದ ಷಣ್ಮುಖಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಕಷ್ಟದಲ್ಲಿರುವ ಗೌಳಿ ಬಸಪ್ಪನವರಿಗೆ ಸಮಾಧಾನ ಹೇಳಿದ್ದಾರೆ. ಅಲ್ಲದೆ, ಸರ್ಕಾರ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಅಂತ ಆಗ್ರಹ ಮಾಡಿದ್ದಾರೆ.

RELATED ARTICLES

Related Articles

TRENDING ARTICLES