ಬೀದರ್ : ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿರುವ ಹಿನ್ನೇಲೆ ಸರ್ಕಾರಿ ಶಾಲೆಗೆ ನುಗ್ಗಿದ ನೀರು ಸಿಂದಬಂದಗಿಯಲ್ಲಿ ಘಟನೆ.
ಕೆರೆ ಎಂತಾದ ಶಾಲೆಯ ಮೈದಾನ ಆವರಣ.
ಹೌದು, ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿ ಸರ್ಕಾರಿ ಶಾಲೆಗೆ ನೀರು ನುಗ್ಗಿ ಭಾರಿ ಅವಾಂತರವನ್ನು ಸೃಷ್ಟಿಸಿದೆ. ಶಾಲೆಗೆ ನೀರು ನುಗ್ಗಿದ ಹಿನ್ನೇಲೆ ಮಕ್ಕಳು ಮತ್ತು ಶಿಕ್ಷಕರು ಶಾಲೆ ಒಳಗೆ ಹೋಗದ ಹಾಗೆ ಪರಿಸ್ಥಿತಿ ನಿರ್ಮಾಣ.
ಇದನ್ನು ಓದಿ :ದೇವೇಗೌಡರೇ ಆ ಪ್ರಾಜೆಕ್ಟ್ ಮಾಡಿಸಿದ್ದು : HDKಗೆ ಡಿಕೆಶಿ ಟಾಂಗ್
ಶಾಲೆಗೆ ಬರಲು ಹಿಂದೆಟು ಹೊಡೆಯುತ್ತಿರುವ ಮಕ್ಕಳು
ಗ್ರಾಮೀಣ ಭಾಗದ ಬಡವರ ಮಕ್ಕಳು ಮಾತ್ರ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು ಶಾಲೆಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಮಕ್ಕಳು ಶಾಲೆಗೆ ಬಂದು ವಿದ್ಯಾಭ್ಯಾಸ ಮಾಡಲು ಹೇಗೆ ಸಾಧ್ಯ, ಎಂದು ಪಾಲಕರು ಪ್ರಶ್ನೆ ಮಾಡಿದರು.
ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳು ಕೂಡಲೇ ಈ ಶಾಲೆಯ ಕಡೆ ಗಮನ ಹರಿಸಿ ಎಂದ ಪೋಷಕರು ಹಾಗೂ ಶಿಕ್ಷಕರು, ಬಳಿಕ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸುಗಮ ವ್ಯವಸ್ಥೆ ಮಾಡಿಕೊಡಬೇಕು ಎಂದು ಪಾಲಕರು ಆಕ್ರೋಶವನ್ನು ವ್ಯಕ್ತಪಡಿಸಿದರು.