Wednesday, January 22, 2025

ಸ್ಕೂಟಿಯಲ್ಲಿಟ್ಟದ್ದ ಹಣ ಕದ್ದು ಪರಾರಿಯಾದ ಕತರ್ನಾಕ್​ ಕಳ್ಳರು!

ತುಮಕೂರು : ಹಾಡಹಗಲೇ ಸ್ಕೂಟಿಯಲ್ಲಿಟ್ಟಿದ್ದ ಹಣವನ್ನು ಕತರ್ನಾಕ್ ಕಳ್ಳರು ಕಳವು ಮಾಡಿರುವ ಘಟನೆ ತುರುವೇಕೆರೆಯ ಬಿರ್ಲಾ ಕಾರ್ನರ್ ಬಳಿ ನೆಡೆದಿದೆ.

ಇದನ್ನೂ ಓದಿ: ವರುಣಾರ್ಭಟಕ್ಕೆ ಆರೆಂಜ್ ಅಲರ್ಟ್​ ಘೋಷಿಸಿದ ಹವಾಮಾನ ಇಲಾಖೆ

ಶಾಲಿನಿ ಹಣ ಕಳೆದುಕೊಂಡವರು, ಇಲ್ಲಿನ ಬಿರ್ಲಾ ಕಾರ್ನರ್​ ಬಳಿ ಇರುವ ಕೆನರಾ ಬ್ಯಾಂಕ್ ನಿಂದ 93 ಸಾವಿರ ಹಣವನ್ನು ಡ್ರಾಮಾಡಿ ತಂದು ಸ್ಕೂಟಿಯಲ್ಲಿಟ್ಟಿದ್ದಾರೆ. ಇದನ್ನು ಕಳ್ಳರ ಗುಂಪು ಗಮನಿಸಿದೆ, ಬ್ಯಾಂಕ್ ನಿಂದ ಮುನ್ನೂರು ಮೀಟರ್ ದೂರದಲ್ಲಿನ ಫ್ಯನ್ಸಿಸ್ಟೋರ್ ಬಳಿ ಹಣವಿದ್ದ ಗಾಡಿ ನಿಲ್ಲಿಸಿ ಸ್ಟೋರ್ ಒಳಗೆ ಹೋದಾಗ ಹಿಂಬಾಲಿಸಿಕೊಂಡು ಬಂದ ಕಳ್ಳರ ತಂಡ ಸ್ಕೂಟಿಯಲ್ಲಿಟ್ಟ ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ಸದ್ಯ ಹಣ ಕಳೆದುಕೊಂಡು ಕಂಗಾಲಾಗಿರುವ ಶಾಲಿನಿ, ತುರುವೇಕೆರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES

Related Articles

TRENDING ARTICLES