Friday, November 22, 2024

ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಕೇಳಿದ್ದಕ್ಕೆ ಕೊಠಡಿಯಿಂದ ಹೊರನಡೆದ ಶೋಭಾ!

ಉಡುಪಿ : ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪೆಚ್ಚು ಮೋರೆ ಹಾಕಿ ಎದ್ದು ಹೊರನಡೆದ ಪ್ರಸಂಗ ನಡೆದಿದೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಂಗಳೂರಿನಲ್ಲಿ ನಡೆದಿದ್ದ ವಿರೋಧ ಪಕ್ಷಗಳ ಸಭೆ ಕುರಿತು ಮಾತನಾಡಿ, ಸಭೆಯನ್ನು ಟೀಕಿಸಿದ್ದರು. ಬಳಿಕ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಕುರಿತೂ ವ್ಯಂಗ್ಯವಾಡಿದರು.

ಕಾಂಗ್ರೆಸ್ ಕುರಿತ ಪ್ರಶ್ನೆಗಳಿಗೆ ಸಾವಧಾನವಾಗಿಯೇ ಉತ್ತರಿಸಿದ್ದ ಕೇಂದ್ರ ಸಚಿವರಿಗೆ ವರದಿಗಾರರು, ನಿಮ್ಮ ವಿರೋಧ ಪಕ್ಷದ ನಾಯಕನ ಆಯ್ಕೆ ಯಾಕೆ ಕಗ್ಗಂಟಾಗಿ ಉಳಿದಿದೆ ಎಂದು ಕೇಳಿದರು. ಆಗ ಶೋಭಾ ಅವರು ಪೆಚ್ಚು ಮೋರೆ ಹಾಕಿ ಕೊಠಡಿಯಿಂದ ಹೊರ ಹೋಗಿದ್ದಾರೆ.

ಇದನ್ನೂ ಓದಿ : ಪ್ರಧಾನಿ ಮೋದಿಗೆ ಪಾಪ್ಯುಲಾರಿಟಿ ಇದೆ, ಆದ್ರೆ..! : ಸಿದ್ದರಾಮಯ್ಯ ಹೀಗೇಳಿದ್ಯಾಕೆ

60 ವರ್ಷಗಳಿಂದ ದೇಶ ಲೂಟಿ

ರಾಷ್ಟ್ರಮಟ್ಟದಲ್ಲಿ I.N.D.I.A ಎಂಬ ವಿರೋಧ ಪಕ್ಷಗಳ ಹೊಸ ಒಕ್ಕೂಟ ರಚನೆಯು ಈಸ್ಟ್ ಇಂಡಿಯಾ ಕಂಪನಿಯ ಹೊಸ ಆವೃತ್ತಿಯಾಗಿದೆ. 60 ವರ್ಷಗಳಿಂದ ದೇಶವನ್ನು ಲೂಟಿ ಮಾಡಿದವರು ಈಗ ಅಧಿಕಾರಕ್ಕಾಗಿ ಒಂದಾಗಿದ್ದಾರೆ. ಇದೀಗ India vs Bharat ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಚಿಹ್ನೆಗಳು ಮತ್ತು ಹೆಸರುಗಳ ಕಾಯಿದೆ. 1950ರ ನಿಬಂಧನೆಗಳನ್ನು ಒಕ್ಕೂಟದ ಹೆಸರಾದ INDIA ಉಲ್ಲಂಘಿಸುತ್ತದೆ. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ ಎಲ್ಲ ನಾಯಕರು ಪ್ರಧಾನಿ ಅಭ್ಯರ್ಥಿಗಳು ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES