ಶಿವಮೊಗ್ಗ : ಕತ್ತಲಾಗುತ್ತಿದ್ದಂತೆ ಶಿವಮೊಗ್ಗದ ಗಾಂಧಿ ಪಾರ್ಕ್ ಪಡ್ಡೆಗಳು, ಕುಡುಕರಿಗೆ ಬಯಲು ಮದ್ಯ ಸೇವನೆಯ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ!
ನಗರದ ಪ್ರತಿಷ್ಠಿತ ಗಾಂಧಿ ಪಾರ್ಕ್ ನ್ನು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ಇದು ಈಗ ಅವ್ಯವಸ್ಥೆಗಳ ಆಗರವಾಗಿದೆ. ಗಾಂಧಿ ಪಾರ್ಕ್ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ನಾಡು ರಕ್ಷಣಾ ವೇದಿಕೆ ಸದಸ್ಯರು ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ತೊಲಗೋ ವರೆಗೂ ಬರಗಾಲ ಹೋಗಲ್ಲ : ಸಿ.ಟಿ ರವಿ
ಬಿಯರ್ ಬಾಟಲಿಗಳ ದರ್ಶನ
ಆಟದ ಸಾಮಗ್ರಿಗಳು ತುಕ್ಕು ಹಿಡಿದಿವೆ. ಕಾರಂಜಿ ಕೆಲಸ ಮಾಡುತ್ತಿಲ್ಲ ಟೈಲ್ಸ್ ಗಳು ಕಿತ್ತುಹೋಗಿವೆ. ಎಲ್ಲೆಂದರಲ್ಲಿ ಕಸ, ಕಡ್ಡಿ, ಜೊತೆಗೆ ಬಿಯರ್ ಬಾಟಲಿಗಳು ಕಾಣಸಿಗುತ್ತವೆ. ಪುಟಾಣಿ ರೈಲು ಕೂಡ ಚಲಿಸುತ್ತಿಲ್ಲ. ಜನಸಾಮಾನ್ಯರು ಪಾರ್ಕಿನೊಳಗೆ ಬರುವುದೇ ಕಷ್ಟವಾಗಿದೆ ಎಂದು ದೂರಿದ್ದಾರೆ.
ಅಲ್ಲದೇ, ಪ್ರಮುಖವಾಗಿ ಗಾಂಧಿ ಪ್ರತಿಮೆ ಕೂಡ ಹಾಳಾಗಿದೆ. ಸಂಜೆಯಾದರೆ ಸಾಕು ಮದ್ಯಪಾನಿಗಳ ಹಾವಳಿ ಹೆಚ್ಚಾಗುತ್ತದೆ. ನಿರ್ವಹಣೆ ಸರಿಯಿಲ್ಲ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕು. ಕೆಟ್ಟುನಿಂತಿರುವ ರೈಲು, ಕಾರಂಜಿ, ಈಜುಕೊಳಕ್ಕೆ ಕಾಯಕಲ್ಪ ನೀಡಬೇಕು. ಸುಂದರ ಪಾರ್ಕನ್ನಾಗಿ ಪರಿವರ್ತಿಸಬೇಕು. ಮನರಂಜನೆಯ ಪಾರ್ಕ್ ಕೂಡ ಆಗಬೇಕು ಎಂದು ಆಗ್ರಹಿಸಿದ್ದಾರೆ.