Thursday, December 19, 2024

ಶೀಲ ಶಂಕಿಸಿ, ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಹಾಸನ : ಪತ್ನಿಯ ಶೀಲವನ್ನು ಶಂಕಿಸಿ ಪತಿಯೇ ಪತ್ನಿಯ ಕೊಲೆ ಮಾಡಿರುವ ಹಿನ್ನೇಲೆ ಹೊಳೆನರಸೀಪುರ ತಾಲೂಕಿನ ಎಸ್. ಅಂಕನಹಳ್ಳಿಯಲ್ಲಿ ನೆಡೆದಿರುವ ಈ ಘಟನೆ.

ಹೌದು, ಎಸ್. ಅಂಕನಹಳ್ಳಿಯ ಚಂದ್ರಮೌಳಿ ಹಾಗೂ ಅಂಬಿಕಾ (28) ಮೃತ ಮಹಿಳೆ ಎಂಬುವವರು ವಾಸವಾಗಿದ್ದರು. ಪತ್ನಿಯು ಆಲಗೌಡನಹಳ್ಳಿ ಗ್ರಾಮದವರು ಅವರನ್ನು ಹೊಳೆನರಸೀಪುರದ ಚಂದ್ರಮೌಳಿಯವರಿಗೆ ಮದುವೆ ಮಾಡಿಕೊಟ್ಟಿರುತ್ತಾರೆ.

ಜಾಕಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬಿಕಾ.

ಅಂಬಿಕಾ ಹಾಸನದ ಜಾಕಿ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು, ಚಂದ್ರಮೌಳಿಗೆ ತನ್ನ ಪತ್ನಿಯ ಬಗ್ಗೆ ಸಂಶಯವಿದ್ದು ಪ್ರತಿದಿನ ಇಬ್ಬರ ನಡುವೆ ಜಗಳ ನಡೆಯುತ್ತಲೆ ಇತ್ತು. ಆದ್ದರಿಂದ ನಿನ್ನೆ ಕೂಡ ಅಂಬಿಕಾಳ ಶೀಲ ಶಂಕಿಸಿ ಜಗಳ ಮಾಡಿಕೊಂಡಿದ್ದರು ಆದ್ದರಿಂದ ಹಳ್ಳಿಮೈಸೂರಿನಲ್ಲಿ ರಾಜಿ ಸಂಧಾನವು ಕೂಡ ನೆಡೆದಿತ್ತು.

ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಪತಿ.

ಆದರೆ ಇಂದು ಕೆಲಸಕ್ಕೆ ಹೋಗಿದ್ದ ಪತ್ನಿಯನ್ನು ಪೋನ್ ಮಾಡಿ ಕರೆಸಿಕೊಂಡಿರುತ್ತಾನೆ, ಬಳಿಕ ಎಸ್. ಅಂಕನಹಳ್ಳಿ ಪಕ್ಕದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ ಪತಿ ಚಂದ್ರಮೌಳಿ.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನೆಡೆದಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆಯನ್ನು ನೆಡೆಸಿದರು.

RELATED ARTICLES

Related Articles

TRENDING ARTICLES