Monday, December 23, 2024

ಎಲೆಕ್ರ್ಟಿಕಲ್ ಹಾರ್ಡ್​ವೇರ್ ಅಂಗಡಿಯೊಂದರಲ್ಲಿ ಕೈಚಳಕ ತೋರಿಸಿದ ಕಳ್ಳರು

ತುಮಕೂರು‌ : ರಾತ್ರಿ ವೇಳೆ ಎಲೆಕ್ರ್ಟಿಕಲ್  ಅಂಡ್ ಹಾರ್ಡ್​ ವೇರ್ ಅಂಗಡಿ ಒಂದರಲ್ಲಿ ಕನ್ನ ಹಾಕಿದ ಕದೀಮರು, ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಈ ಘಟನೆ ನೆಡೆದಿದೆ.

ಹೌದು, ರಾತ್ರೋ ರಾತ್ರಿ ತುರುವೇಕೆರೆ ಪಟ್ಟಣದ ಮಧುರಾಂ ಎಂಬುವರಿಗೆ ಸೇರಿದ ಶಾರದ ಎಲೆಕ್ರ್ಟಿಕಲ್ ಅಂಡ್ ಹಾರ್ಡ್​ ವೇರ್ ಅಂಗಡಿಯೊಂದರಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿ ಪರಾರಿಯಾಗಿದ್ದಾರೆ.

ಇದನ್ನು ಓದಿ : ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ : ಸಚಿವೆ ಶೋಭಾ ಕರಂದ್ಲಾಜೆ

ಅಂಗಡಿಗೆ ನುಗ್ಗಿದ ಕದೀಮರು ಅಂಗಡಿಯಲ್ಲಿದ್ದ 35 ಸಾವಿರ ನಗದು ಹಣ, ಒಂದು ಎಟಿಎಂ ಕಾಡ್​, ಹಾಗೂ 75 ಸಾವಿರ ಬೆಲೆ ಬಾಳುವ ಒಂದು ಮೊಬೈಲ್, 54 ಸಾವಿರ ಬೆಲೆ ಬಾಳುವ ಕಾಪರ್ ವೈಯರ್ ಮುತಾಂದ ವಸ್ತುಗಳನ್ನು ಕದ್ದು ಪರಾರಿಯಾಗಿರುವ ಕಳ್ಳರು. ಹಾಗೂ

3 ಲಕ್ಷಕ್ಕೂ ಅಧಿಕ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾದ ಕಳ್ಳರ ಗುಂಪು.

ಅಂಗಡಿಯ ಮಾಲೀಕ ಮಧುರಾಂ ಅವರು ಈ ಪ್ರಕರಣದ ಹಿನ್ನೇಲೆ ತುರುವೇಕೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ, ತನಿಖೆ ನೆಡೆಸುತ್ತಿರುವ ಪೋಲಿಸರು.

RELATED ARTICLES

Related Articles

TRENDING ARTICLES