ರಾಯಚೂರು : ಹಣ ನೀಡದಿದ್ದಕ್ಕೆ ಹೆತ್ತ ತಂದೆಯನ್ನೆ ಕೊಲೆ ಮಾಡಿ ಹುತ್ತಿಟ್ಟಿದ್ದ ಆರೋಪಿ ಮಗನನ್ನು ಪೋಲಿಸರು ಬಂಧಿಸಿದ್ದಾರೆ.
ರಾಯಚೂರು ತಾಲ್ಲೂಕಿನ ವಡ್ಲೂರು ಗ್ರಾಮದ ಶಿವಪ್ಪ (65) ಕೊಲೆಯಾದ ತಂದೆ. ಪುತ್ರ ಈರಣ್ಣ ಬಂಧಿತ ಆರೋಪಿ.
ಮೃತ ಶಿವಪ್ಪ ಅವರ ಜಮೀನಿನಲ್ಲಿ ಹೆದ್ದಾರಿ ನಿರ್ಮಾಣ ಹಿನ್ನಲೆ ಭೂ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಹಣ ಬಂದಿತ್ತು. ಇದನ್ನು ಗಮನಿಸಿದ್ದ ಮಗ ಈರಣ್ಣ ತಂದೆಯ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.
ಇದನ್ನು ಓದಿ : Gruhalakshmi Scheme : ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ತಂದೆಯ ಬಳಿ ಹೋಗಿ ಹಣ ಕೇಳಿದ್ದಾನೆ. ಆದರೆ, ಮೃತ ವ್ಯಕ್ತಿ ಶಿವಪ್ಪ ಹಣ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಈರಣ್ಣ ತಂದೆಯ ಜೊತೆ ಜಗಳ ಶುರು ಮಾಡಿದ್ದಾನೆ. ಜಗಳ ಅತಿರೇಕಕ್ಕೆ ಹೋಗಿ ಕೊನೆಗೆ ಹೆತ್ತ ತಂದೆಯನ್ನೇ ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ ತಂದೆಯ ಶವವನ್ನು ಆರೋಪಿ ಈರಣ್ಣ ಹೂತಿಟ್ಟಿದ್ದನು. ಕೊಲೆ ಮಾಡಿದ ಬೆನ್ನಲ್ಲೇ ತನ್ನ ಮೇಲೆ ಆರೋಪ ಬರುತ್ತದೆ ಎಂದು ತಾನೆ ರಾಯಚೂರು ಪೋಲಿಸ್ ಠಾಣೆಗೆ ಹೋಗಿ ತಂದೆ ಕಾಣೆಯಾಗಿದ್ದಾರೆ ಎಂದು ಮಿಸ್ಸಿಂಗ್ ದೂರನ್ನು ದಾಖಲಿಸಿದ್ದನು. ಈ ಸಂಬಂಧ ಪೋಲಿಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಆರೋಪಿ ಈರಣ್ಣ ಸತ್ಯ ಬಾಯ್ಬಿಟ್ಟಿದ್ದಾನೆ.