Friday, May 17, 2024

ಸರ್ಕಾರ IAS ಅಧಿಕಾರಿಗಳನ್ನ ಗುಲಾಮರಂತೆ ಬಳಸಿಕೊಳ್ಳುತ್ತಿದೆ : ಕುಮಾರಸ್ವಾಮಿ

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಅಸಭ್ಯ ವರ್ತನೆ ತೋರಿಸಿದ ಬಿಜೆಪಿ ಶಾಸಕರನ್ನು ಸ್ಪೀಕರ್ ಯುಟಿ ಖಾದರ್  ಅಮಾನತುಗೊಳಿಸಿದ ಹಿನ್ನಲೇಯಲ್ಲಿ ಇದೀಗ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯಕ ವಾಗ್ದಾಳಿ ನಡೆಸಿದ್ದಾರೆ.

ಸದನದಲ್ಲಿ ಕೋಲಾಹಲ ನಡೆದ ನಂತರ ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್​ ಸರ್ಕಾರ ದರ್ಪ, ದಬ್ಬಾಳಿಕೆ ನಡೆಸುತ್ತಿದೆ. ಐಎಎಸ್​ ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಬಿಜೆಪಿ, ಜೆಡಿಎಸ್ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸಿದೆ ಎಂದು ಅವರು ಕಿಡಿಕಾರಿದ್ಧಾರೆ.

ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಿಎಂ ಆಗಿದ್ದಾಗ ಬೇರೆ ರಾಜ್ಯಗಳ ಸಿಎಂಗಳ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿರಲಿಲ್ಲ. ಜೆಡಿಎಸ್​ ನಾಯಕರಾಗಿದ್ದ ಡ್ಯಾನಿಶ್​ ಅಲಿ ಸ್ವಾಗತಕ್ಕೂ ನೇಮಿಸಿರಲಿಲ್ಲ.ಆದರೆ, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ತಮಗೆ ವಿಶೇಷ ಕ್ಯಾಬಿನ್, ಅಧಿಕಾರಿ ಬೇಕು ಎಂದಿದ್ದರು.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪ್ರತಿಭಟನೆಗೆ ಹೆಚ್​ಡಿಕೆ ಸಾಥ್​ 

ಬಿಜೆಪಿ, ಜೆಡಿಎಸ್​ ಒಟ್ಟಿಗೆ ಸೇರಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ. ಧರಣಿನಿರತರಿಗೆ ಶಿಕ್ಷೆ ಕೊಡುತ್ತೇವೆಂದು ಊಟಕ್ಕೆ ಬಿಟ್ಟಿರಲಿಲ್ಲ. ಭೋಜನ ವಿರಾಮಕ್ಕೆ ಬಿಡದೆ ಡೆಪ್ಯುಟಿ ಸ್ಪೀಕರ್​ ಕಲಾಪ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಡೆಪ್ಯುಟಿ ಸ್ಪೀಕರ್​ ಕಲಾಪ ಮುಂದುವರಿಸಿದ್ದರು. ಹಸಿವಿನಿಂದ ಆಕ್ರೋಶಗೊಂಡು ಕೆಲವರು ಕಾಗದ ಪತ್ರ ಹರಿದಿದ್ದಾರೆ.  ಸ್ಪೀಕರ್ ಪೀಠದಲ್ಲಿ ಕುಳಿತವರು 224 ಶಾಸಕರಿಗೆ ರಕ್ಷಣೆ ಕೊಡಬೇಕು. ಇಂತಹ ರಾಜಕೀಯ ಗಿಮಿಕ್​ ಹೆಚ್ಚು ದಿನ ನಡೆಯುವುದಿಲ್ಲ ಎಂದು ಅವರು ಟೀಕಿಸಿದರು.

RELATED ARTICLES

Related Articles

TRENDING ARTICLES