Saturday, November 2, 2024

ಬಿಜೆಪಿ ಶಾಸಕರು ಅನಾಗರಿಕರಂತೆ ನಡೆದುಕೊಳ್ಳುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ 

ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ನಾಯಕರ ವರ್ತನೆ ಸರಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಹೌದು, ಅಧಿವೇಶನದಲ್ಲಿ ನಡೆದ ಕೋಲಾಹಲ ಬಗ್ಗೆ ಸದನ ಪುನಾರಂಭಗೊಂಡ ಬಳಿಕ ಮಾತನಾಡಿದ ಅವರು ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದು, ಇದೊಂದು ಗುಂಡಾವರ್ತನೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಡೆಪ್ಯುಟಿ ಸ್ಪೀಕರ್ ಮುಖಕ್ಕೆ ಪೇಪರ್ ಎಸೆತ : ಅಮಾನತು ಆದ ಬಿಜೆಪಿಯ 10 ಶಾಸಕರು ಯಾರ‍್ಯಾರು..?

ಬಿಜೆಪಿ ಸದಸ್ಯರು ಬಜೆಟ್ ಮೇಲೆ ಚರ್ಚೆ ಮಾಡಬೇಕಿತ್ತು. ನಮ್ಮ ಐದು ಗ್ಯಾರಂಟಿಗಳಿಂದ ಬೇಸತ್ತು ಹೋಗಿದ್ದಾರೆ. ಅವರ ಯೋಗ್ಯತೆಗೆ ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಆಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಡೆಪ್ಯುಟಿ ಸ್ಪೀಕರ್ ಮುಖಕ್ಕೆ ಪೇಪರ್ ಎಸೆತ

ರಾಜಕೀಯ ವ್ಯಕ್ತಿಗಳ ಆತಿಥ್ಯಕ್ಕೆ ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಿದ್ದನ್ನು ವಿರೋಧಿಸಿ ವಿಧಾನಸಭೆಯಲ್ಲಿ ನಡೆಸುತ್ತಿರುವ ಪ್ರತಿಭಟನೆ ವೇಳೆ ಬಿಜೆಪಿ ಸದಸ್ಯರು ಮಸೂದೆಗಳ ಪ್ರತಿಗಳನ್ನು ಹರಿದು ಪೀಠದಲ್ಲಿದ್ದ ಉಪ ಸಭಾಧ್ಯಕ್ಷರ ಮೇಲೆ ಸೆದಿದ್ದರಿಂದ ಕೋಲಾಹಲ ಸೃಷ್ಟಿ ಮಾಡಿದು ತಪ್ಪು ಸದನಕ್ಕೆ ನೀಡುವ ಅಗೌರವ ಇದರಲ್ಲಿ ಬಿಜೆಪಿ ಶಾಸಕರು ಅನಾಗರಿಕರಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.

 

 

RELATED ARTICLES

Related Articles

TRENDING ARTICLES