Sunday, December 22, 2024

Asia Cup 2023 Schedule: ಏಷ್ಯಾಕಪ್ ವೇಳಾಪಟ್ಟಿ ರಿಲೀಸ್​

ಬೆಂಗಳೂರು: ಏಷ್ಯಾಕಪ್ 2023ರ ವೇಳಾಪಟ್ಟಿ ಇಂದು ಪ್ರಕಟವಾಗಿದೆ. ಈ ಪಂದ್ಯ ಆಗಸ್ಟ್ 30 ರಿಂದ ಶುರುವಾಗಲಿದ್ದು,ಈ ಪಂದ್ಯವು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ.

ಹೌದು, ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದ್ದು, ಈ ಪಂದ್ಯಗಳಿಗಾಗಿ ಉಳಿದ ತಂಡಗಳು ಲಂಕಾಗೆ ಆಗಮಿಸಲಿದವೆ.ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

ಏಷ್ಯಾಕಪ್ ವೇಳಾಪಟ್ಟಿ ಹೀಗಿದೆ: 

  1. ಆಗಸ್ಟ್ 30- ಪಾಕಿಸ್ತಾನ್ vs ನೇಪಾಳ (ಮುಲ್ತಾನ್)
  2. ಆಗಸ್ಟ್ 31- ಬಾಂಗ್ಲಾದೇಶ್ vs ಶ್ರೀಲಂಕಾ (ಕ್ಯಾಂಡಿ)
  3. ಸೆಪ್ಟೆಂಬರ್ 2- ಭಾರತ vs ಪಾಕಿಸ್ತಾನ್ (ಕ್ಯಾಂಡಿ)
  4. ಸೆಪ್ಟೆಂಬರ್ 3- ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ (ಲಾಹೋರ್)
  5. ಸೆಪ್ಟೆಂಬರ್ 4- ಭಾರತ vs ನೇಪಾಳ (ಕ್ಯಾಂಡಿ)
  6. ಸೆಪ್ಟೆಂಬರ್ 5- ಶ್ರೀಲಂಕಾ vs ಅಫ್ಘಾನಿಸ್ತಾನ್ (ಲಾಹೋರ್)

ಸೂಪರ್-4 ಹಂತದ ವೇಳಾಪಟ್ಟಿ:

  1. ಸೆಪ್ಟೆಂಬರ್ 6- A1 Vs B2 (ಲಾಹೋರ್)
  2. ಸೆಪ್ಟೆಂಬರ್ 9- B1 Vs B2 (ಕೊಲಂಬೊ)
  3. ಸೆಪ್ಟೆಂಬರ್ 10- A1 Vs A2 (ಕೊಲಂಬೊ)
  4. ಸೆಪ್ಟೆಂಬರ್ 12- A2 Vs B1 (ಕೊಲಂಬೊ)
  5. ಸೆಪ್ಟೆಂಬರ್ 14- A1 Vs B1 (ಕೊಲಂಬೊ)
  6. ಸೆಪ್ಟೆಂಬರ್ 15- A2 Vs B2 (ಕೊಲಂಬೊ)
  7. ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)

ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಈ ಹಿಂದಿನ 5 ತಂಡಗಳ ಜೊತೆ ಈ ಬಾರಿ ನೇಪಾಳ ತಂಡವು ಅರ್ಹತೆ ಪಡೆದುಕೊಂಡಿದೆ. ಅದರಂತೆ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ನೇಪಾಳ ತಂಡವು ಗ್ರೂಪ್​-ಬಿ ನಲ್ಲಿದ್ದು, ಏಷ್ಯಾದ ಬಲಿಷ್ಠ ಎರಡು ತಂಡಗಳಾದ ಭಾರತ ಮತ್ತು ಪಾಕಿಸ್ತಾನ್ ವಿರುದ್ಧ ಕಳಗ ನಡೆಯಲಿದೆ.

 

RELATED ARTICLES

Related Articles

TRENDING ARTICLES