Friday, January 24, 2025

ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾದ ಯುವಕ

ಬೆಂಗಳೂರು: ಸೆಲ್ಫಿ ತೆಗೆಯಲು ಹೋಗಿ ಸಮುದ್ರಪಾಲಾಗಿರುವ ಘಟನೆ ತ್ರಾಸಿ ಮರವಂತೆ ಬೀಚ್​ನಲ್ಲಿ ನಡೆದಿದೆ. 

ಹೌದು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್​ ನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಸೆಲ್ಫೀ ತೆಗೆಯಲು ಹೋಗಿ ನೀರಪಾಲಾಗಿದ್ದ ಯುವಕನ ಮೃತದೇಹ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.

ಇನ್ನೂ ನೀರುಪಾಲಾದವರನ್ನು ಮೂಲತಃ ಗದಗದ ಪ್ರಸ್ತುತ ಕಾಪುವಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಫಿ‌ಸಾಬ್ ನಾದಾಫ್(22) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಹೆತ್ತ ತಂದೆ ತಾಯಿಯನ್ನೇ ರಾಡ್​ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಮಗ!

ಕಾಪುವಿನಿಂದ ಹೊರಟ ಟ್ಯಾಂಕರಿನಲ್ಲಿ ನದಾಫ್ ಹಾಗೂ ಇತರ ಇಬ್ಬರು ಆಗಮಿಸಿದ್ದು ತ್ರಾಸಿ ಬಳಿ ಸಮುದ್ರ ತೀರಕ್ಕೆ ಬಂದಿದ್ದರು. ಈ ವೇಳೆ ನದಾಫ್ ಫೋನ್ ಕರೆಯಲ್ಲಿದ್ದು ದೈತ್ಯ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.

ಫಿ‌ಸಾಬ್ ನಾದಾಪ್ ಅವರಿಗೆ ಮಧ್ಯಾಹ್ನದಿಂದಲೂ ಶೋಧ ಕಾರ್ಯ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳ, ಗಂಗೊಳ್ಳಿ ಆಪತ್ಯಾಂಧವ ಅಂಬುಲೆನ್ಸ್ ಕಾರ್ಯಕರ್ತರು ತೊಡಗಿಸಿ ಕೊಂಡಿದ್ದಾರೆ.

 

RELATED ARTICLES

Related Articles

TRENDING ARTICLES