Sunday, January 19, 2025

ಬಿಜೆಪಿ ಸ್ವಂತ ಬಲದಲ್ಲಿ 303 ಸ್ಥಾನ ಗೆದ್ದಿಲ್ಲ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ಬಿಜೆಪಿ ಸ್ವಂತ ಬಲದಲ್ಲಿ 303 ಸ್ಥಾನ ಗೆದ್ದಿಲ್ಲ, ಮಿತ್ರಪಕ್ಷಗಳ ವೋಟು ಪಡದೇ ಅವರು ಅಧಿಕಾರದಲ್ಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಕಿದ್ದಾರೆ.

ಮಹಾಘಟಬಂಧನ್ ಸಭೆ ಬಳಿಕ ಟ್ವೀಟ್ ಮಾಡಿರುವ ಅವರು, ನಮ್ಮ ಒಗ್ಗಟ್ಟು ನೋಡಿ ಅವರಲ್ಲಿ ಸೋಲಿನ ಭಯ ಹುಟ್ಟಿಸಿದೆ ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಇಂದು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ

ವಿವಿಧ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ವಿರುದ್ಧ ಆಯುಧವಾಗಿ ಬಳಸುತ್ತಿದ್ದಾರೆ. ನಮ್ಮ ಈ ಒಗ್ಗೂಡುವಿಕೆ ಅಧಿಕಾರಕ್ಕಾಗಿ ಅಲ್ಲ. ಸಂವಿಧಾನ, ಜಾತ್ಯಾತೀತತೆ, ಸಾಮಾಜಿಕ ನ್ಯಾಯಕ್ಕಾಗಿ ಒಂದುಗೂಡಿದ್ದೇವೆ. ನೈಜ ಪ್ರಜಾಪ್ರಭುತ್ವ, ಅಭಿವೃದ್ಧಿ, ಮತ್ತು ದೇಶದ ಕಲ್ಯಾಣಕ್ಕಾಗಿ ನಾವು ಒಗ್ಗೂಡಬೇಕಿದೆ ಎಂದು ಹೇಳಿದ್ದಾರೆ.

ಮೈತ್ರಿ ಉಳಿಸಿಕೊಳ್ಳಲು ಪ್ಯಾಚಪ್

ಮಹಾಘಟಬಂಧನ್ ಸಭೆಯಲ್ಲಿ 26 ಪಕ್ಷಗಳು ಭಾಗಿಯಾಗಿದ್ದು ಅತ್ಯಂತ ಸಂತೋಷವಾಗಿದೆ. ನಾವೇ ಒಟ್ಟಾರೆಯಾಗಿ 11 ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದೇವೆ. ಹಳೆಯ ಮೈತ್ರಿ ಉಳಿಸಿಕೊಳ್ಳಲು ಪ್ಯಾಚಪ್ ಮಾಡಿಕೊಳ್ಳಲು ರಾಜ್ಯದಿಂದ ರಾಜ್ಯಕ್ಕೆ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಓಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

RELATED ARTICLES

Related Articles

TRENDING ARTICLES