Monday, December 23, 2024

Power Impact : ಗೇಟ್ ಹತ್ತಿ ಯುವತಿ ಪರಾರಿ, ಆರೋಪಿ ಬಂಧನ

ತುಮಕೂರು : ಹಾಸ್ಟೆಲ್ ಗೇಟ್ ಹತ್ತಿ ಎಸ್ಕೇಪ್ ಆದ ವಿದ್ಯಾರ್ಥಿನಿ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದು ಪವರ್ ಟಿವಿಯ ಬಿಗ್ ಇಂಪ್ಯಾಕ್ಟ್ ಆಗಿದೆ.

ತುಮಕೂರು ಜಿಲ್ಲೆ, ಕೊರಟಗೆರೆ ಪಟ್ಟಣದ ಸರ್ಕಾರಿ ಮೆಟ್ರಿಕ್ಸ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ಈ ಘಟನೆ ನಡೆದಿತ್ತು. ಯುವತಿ ಗೇಟ್ ಹತ್ತಿ ಈಚೆ ನಿಂತಿದ್ದ ಟಾಟ ಏಸ್ ಹತ್ತಿ ಪರಾರಿಯಾಗಿದ್ದಳು.ರಾತ್ರಿ ಇಡೀ ಹೊರಗಡೆ ಇದ್ದು ಮತ್ತೆ ಬೆಳಗಿನ ಜಾವ 5 ಗಂಟೆಗೆ ವಿದ್ಯಾರ್ಥಿನಿ ಹಾಸ್ಟಲ್ ಸೇರಿಕೊಂಡಿದ್ದಳು.

ಹಾಸ್ಟೆಲ್ ವಾರ್ಡನ್ ಶೃತಿ ಡ್ಯೂಟಿ ಮುಗಿಸಿಕೊಂಡು ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿತ್ತು. ಯುವತಿ ಆರ್ಯಗೌಡ ಎಂಬುವನ ಜೊತೆ ಎಸ್ಕೇಪ್ ಆಗಿದ್ದಳು. ಆರ್ಯಗೌಡ ಕೊರಟಗೆರೆ ತಾಲೂಕಿನ ದುಗ್ಗೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಕಾವಲುಗಾರ ಇದ್ದರೂ ಹುಡುಗಿ ಗೇಟ್ ಹತ್ತಿ ಎಸ್ಕೇಪ್ ಆಗಿದ್ದಳು. ಸದ್ಯ ಕೊರಟಗೆರೆ ಪೊಲೀಸರು ಆರೋಪಿ ಆರ್ಯಗೌಡನನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಹಾಸ್ಟೆಲ್ ಗೇಟ್​ ಹಾರಿ ಎಸ್ಕೇಪ್

ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಪ್ರಥಮ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿನಿಯರು ರಾತ್ರಿ ವೇಳೆ ಹಾಸ್ಟೆಲ್ ಗೇಟ್​ ಹಾರಿ ಗಂಟೆಗಳ ಬಳಿಕ ಮತ್ತೆ ವಾಪಾಸ್​ ಬಂದು ಸೇರಿಕೊಳ್ಳುತ್ತಿದ್ದರು. ಬಾಲಕಿಯರು ನಡುರಾತ್ರಿ ಹೊರ ಹೋದರು, ಬಂದರೂ ಹೇಳೋರೂ ಕೇಳೋರೂ ಇರಲಿಲ್ಲ. ಈ ಭದ್ರತಾ ಲೋಪದ ಬಗ್ಗೆ ಪವರ್ ಟಿವಿ ವರದಿ ಮಾಡಿತ್ತು.

RELATED ARTICLES

Related Articles

TRENDING ARTICLES