Monday, December 23, 2024

ದೇಶದ ಜನ ಬಿಜೆಪಿ ಕೈಗೆ ಚಿಪ್ಪು ಕೊಡಲಿದ್ದಾರೆ : ಶಿವರಾಜ ತಂಗಡಗಿ

ಚಿತ್ರದುರ್ಗ : ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ಚಿಪ್ಪು ಕೊಟ್ಟಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ವಂಚಿಸಿದೆ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಚಿಪ್ಪು ಎಂದ ಸಿ.ಟಿ ರವಿಗೆ ತಿರುಗೇಟು ಕೊಟ್ಟರು.

ಕಪ್ಪು ಹಣ ತಂದಿಲ್ಲ, ಪ್ರತಿಯೊಬ್ಬನ ಅಕೌಂಟಿಗೆ 15 ಲಕ್ಷ ರೂಪಾಯಿ ದುಡ್ಡು ಹಾಕಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡಲಿಲ್ಲ. ನಮ್ಮ ಸರ್ಕಾರ ಈಗಾಗಲೇ 3 ಗ್ಯಾರಂಟಿ ಜಾರಿಗೊಳಿಸಿದೆ. ಇನ್ನೆರಡು ಗ್ಯಾರಂಟಿ ಯೋಜನೆಗಳು ಜಾರಿ ಆಗಲಿವೆ ಎಂದರು ಹೇಳಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಅನುಭವಿ ಸಿಎಂ, ಆದ್ರೆ..! : ವಿಜಯೇಂದ್ರ ಏನಂದ್ರು ನೋಡಿ

ಜೆಡಿಎಸ್ ಗೆ ಆದ ಗತಿ ಬಿಜೆಪಿಗೆ

ಕಳೆದ ಚುನಾವಣೆಯಲ್ಲಿ ಜನ ಬಿಜೆಪಿಗೆ ಚಿಪ್ಪು ಕೊಟ್ಟಿದ್ದಾರೆ. ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಅರಾಜಕತೆ ಸೃಷ್ಠಿಯಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲೇ ಬಿಜೆಪಿಗೆ ಚಿಪ್ಪು ಕೊಡಲಿದ್ದಾರೆ. ಈಗ ಜೆಡಿಎಸ್ ಗೆ ಆದ ಗತಿ ಬಿಜೆಪಿಗೆ ಆಗಲಿದೆ ಎಂದು ಸಚಿವ ಶಿವರಾಜ್ ತಂಗಡಗಿ ಕುಟುಕಿದರು.

ಮಹಾಘಟಬಂಧನ್ ಸಭೆ ಬಗ್ಗೆ ಮಾತನಾಡಿ, ಮಹಾಘಟಬಂಧನ್‌ಗೂ ಇದಕ್ಕೂ ಏನು ಸಂಬಂಧ. ಮಹಾಘಟಬಂಧನ್‌ಗೆ ಇನ್ನು 9 ತಿಂಗಳ ಸಮಯವಿದೆ. ದೇಶದಲ್ಲಿ 9 ವರ್ಷ ಆಡಳಿತ ನಡೆಸಿರುವ ಬಿಜೆಪಿ ಎಲ್ಲವನ್ನೂ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಮಹಾಘಟಬಂಧನ್‌ ಮೂಲಕ ದೇಶಕ್ಕೆ ಒಳ್ಳೆಯ ಸಂದೇಶ ಕೊಡೋಕೆ ಹೊರಟಿದೆ ಎಂದರು.

RELATED ARTICLES

Related Articles

TRENDING ARTICLES