ಬೆಂಗಳೂರು : ಕುಮಾರಣ್ಣ ಮಾತಾಡ್ತಾರೆ, ಅವರಿಗೂ ನ್ಯೂಸ್ ಬೇಕಲ್ವಾ? ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ಸಭೆ ನಡೆಯುತ್ತಿದೆ. ಅವ್ರಿಗೆ ಆಹ್ವಾನ ಕೊಟ್ಟಿಲ್ಲ. ಎನ್ ಡಿಎ ಆಹ್ವಾನಕ್ಕೆ ಕಾಯ್ತಿದ್ದಿವಿ ಅಂದಿದ್ದಾರೆ ಎಂದು ಚಾಟಿ ಬೀಸಿದರು.
ಅಧಿಕಾರಿಳ ದುರ್ಬಳಕೆ ವಿಚಾರ ಕುರಿತು ಮಾತನಾಡಿ, ನಾನು ಕುಮಾರಸ್ವಾಮಿ ಹೇಳಿಕೆಗೆ ಉತ್ತರ ಕೊಡಲು ತಯಾರಿಲ್ಲ. ರಾಜ್ಯದ ಕಾಂಗ್ರೆಸ್ ಸರಕಾರ ಇದೆ. ಸರ್ಕಾರ ಇರ್ತದೆ, ಹೊಗ್ತದೆ. ಪ್ರೋಟೋಕಾಲ್ ಅಲ್ಲಿ ಸ್ಟೇಟ್ ಗೆಸ್ಟ್ ಅಂತ ನೇಮಕ ಮಾಡಿದಾಗ ಅಲ್ಲಿ ಯಾರು ಇರಬೇಕೋ ಇರ್ತಾರೆ ಎಂದರು.
ಇದನ್ನೂ ಓದಿ : ಇವ್ರು ಮಾಡ್ತಿರೋದು ರಾಜಕೀಯವೋ? ರಾಜ್ಯದ ಅಭಿವೃದ್ಧಿಯೋ? : ಕುಮಾರಸ್ವಾಮಿ ಕಿಡಿ
ಹಿಂದಿನಿಂದ ಬಂದ ಪದ್ದತಿ
ಗೆಸ್ಟ್ ಸ್ವೀಕರಿಸೋದಕ್ಕೆ, ಕಳಿಸೋದಕ್ಕೆ ನಾನು ಸೇರಿ ಹಲವು ಮಂತ್ರಿಗಳು ಹೋಗಿ ಕೆಲವು ಸಿಎಂಗಳನ್ನು ರಿಸೀವ್ ಮಾಡಿದ್ದೀವಿ. ಬೇರೆ ಮಂತ್ರಿಗಳು, ಹಾಗೆಯೇ ಅಧಿಕಾರಿಗಳನ್ನು ಹಿರಿಯ ನಾಯಕರಿಗೆ ಪ್ರೋಟೋಕಾಲ್ ಪ್ರಕಾರ ನೇಮಿಸಲಾಗಿದೆ. ಇದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ದತಿ ಎಂದು ಡಿಕೆಶಿ ಸಮರ್ಥನೆ ಮಾಡಿಕೊಂಡರು.
HDK ಆರೋಪದಲ್ಲಿ ಹುರುಳಿಲ್ಲ
ಈ ವಿಚಾರವಾಗಿ ಮಾತನಾಡಿದ ಸಲೀಂ ಅಹಮ್ಮದ್, ಬಂದವರಲ್ಲಿ ಕೆಲವರು ಸಿಎಂ, ಡಿಸಿಎಂ ಹಾಗೆಯೇ ಕೇಂದ್ರದ ನಾಯಕರು ಇದ್ದಾರೆ. ಕುಮಾರಸ್ವಾಮಿ ಅವರ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಲವು ರಾಜ್ಯದ ಸಿಎಂ ಬಂದಿದ್ದಾರೆ. ಅವರು ಸ್ಟೇಟ್ ಗೆಸ್ಟ್, ಹೀಗಾಗಿ ಪ್ರೋಟೋಕಾಲ್ ಕೊಡಬೇಕಾಗುತ್ತೆ ಎಂದು ಹೇಳಿದರು.