Monday, December 23, 2024

ಡಿಕೆಶಿ ಪಾದಯಾತ್ರೆ ಮಾಡಿದ್ದು ಬರೀ ನಾಟಕ, ದೊಂಬ್ರಾಟ ಅಷ್ಟೇ : ಆರ್. ಅಶೋಕ್

ಬೆಂಗಳೂರು : ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮಾಡಿದ್ದು ಬರೀ ನಾಟಕ, ದೊಂಬ್ರಾಟ ಅಷ್ಟೇ ಎಂದು ಮಾಜಿ ಸಚಿವ ಆರ್. ಅಶೋಕ್ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಬೊಕೆ ಕೊಟ್ಟು ಬರ ಮಾಡಿಕೊಂಡ್ರಿ. ಕಾಂಗ್ರೆಸ್ ಗೆ ನಾಚಿಕೆ ಆಗಲ್ವಾ, ಅಂತವರನ್ನು ಬರ ಮಾಡಿಕೊಳ್ಳೋಕೆ  ಎಂದು ಗುಡುಗಿದರು.

ಮೇಕೆದಾಟು ಯೋಜನೆಯಲ್ಲಿ ಡಿಕೆಶಿ, ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದೂ, ಮಾಡಿದ್ದೆ. ರೂಲ್ಸ್ ವೈಲೇಷನ್ ಮಾಡಿ ಪಾದಯಾತ್ರೆ ಮಾಡಿದ್ದರು. ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ವಾ ಅಂತ ನಮಗೆ ಕೇಳಿದ್ರು. ಈಗ ನಾವು ನಿಮಗೆ ಕೇಳ್ತೀವಿ, ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲವಾ? ಎಂದು ಛೇಡಿಸಿದರು.

ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆ ಅಲ್ಲ, ಶೋಗಾಗಿ ನಡೆಸಿದ ಯಾತ್ರೆ : ಹೆಚ್​​ಡಿಕೆ

ಹೋಗಿ ಸ್ಟಾಲಿನ್ ಗೆ ಕೇಳಿ, ಕೇಂದ್ರಕ್ಕಲ್ಲ

ಈಗ ಸಿಎಂ ಸ್ಟಾಲಿನ್ ಬಂದಿದ್ದಾರೆ. ನೀವು ಮೇಕೆದಾಟು ಯೋಜನೆ ಮಾಡಿ. ಹೂಗುಚ್ಚ ಕೊಟ್ಟು ಸ್ವಾಗತ ಮಾಡಿದ್ದೀರಾ. ಮೇಕೆದಾಟಿಗೆ ನಾವು ಅವಕಾಶ ಕೊಡಲ್ಲ ಅಂತ ಹೇಳಿದ್ರು ಸ್ಟಾಲಿನ್. ಹೋಗಿ ಸ್ಟಾಲಿನ್ ಗೆ ಕೇಳಿ, ಕೇಂದ್ರ ಸರ್ಕಾರಕ್ಕೆ ಕೇಳೋದು ಅಲ್ಲ. ತಮಿಳುನಾಡು ಸಿಎಂ ಸ್ಟಾಲಿನ್ ಗೆ ಕೇಳ್ರೀ ಎಂದು ಆರ್. ಅಶೋಕ್ ಚಾಟಿ ಬೀಸಿದರು.

ಕರ್ನಾಟಕ ATM ಆಗಿ ದುರ್ಬಳಕೆ

ಐಎಎಸ್ ಅಧಿಕಾರಿಗಳ ದುರ್ಬಳಕೆ ವಿಚಾರವಾಗಿ ಮಾತನಾಡಿ, ಇದರಲ್ಲಿ ಆರೋಪ ಪ್ರಶ್ನೆ ಇಲ್ಲ. ಕರ್ನಾಟಕದ ಬಡವರ ತೆರಿಗೆ ಹಣವನ್ನು ಕಾಂಗ್ರೆಸ್ ಪಕ್ಷ ಅವರ ಸೇವೆಗೆ, ಕಾರಿನ ಬಾಗಿಲು ತೆಗೆಯಲು ಬಳಸಿದೆ. ಸರ್ಕಾರದ ಬಡವರ ಹಣವನ್ನು ಮೋಜು ಮಸ್ತಿ ಮಾಡಲು ಬಂದಿದೆ. ಯುಪಿಎ ಇದೊಂದು ಫೋಟೋ ಶೋ. ಅಧಿಕಾರಿಗಳ ದುರ್ಬಳಕೆ ನೋಡಿದ್ರೆ ಕರ್ನಾಟಕವನ್ನು ಎಟಿಎಂ ಆಗಿ ದುರ್ಬಳಕೆ ಮಾಡಿಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES