Monday, December 23, 2024

ಕಲಬುರಗಿಯಲ್ಲಿ ಕಳ್ಳ ಪೊಲೀಸ್ ಆಟ : ಪಿಎಸ್ಐ ಪಿಸ್ತೂಲ್ ಸಮೇತ ಕಳ್ಳ ಎಸ್ಕೇಪ್

ಕಲಬುರಗಿ : ನೀವೆಲ್ಲಾ ಕಳ್ಳ ಮತ್ತು ಪೊಲೀಸ ಆಟ ಅಂತ ಕೇಳಿರ್ತೀರಿ, ಸಿನಿಮಾದಲ್ಲಿ ನೋಡಿರ್ತಿರಿ. ಆದರೆ, ಜಿಲ್ಲೆಯಲ್ಲಿ ಇಂದು ನಿಜವಾಗಿಯೂ ಕಳ್ಳ ಪೊಲೀಸ್ ಆಟವೊಂದು ನಡೆದಿದೆ.

ಕುಖ್ಯಾತ ಕಳ್ಳನೋರ್ವನನ್ನು ಪೊಲೀಸರು ಹಿಡಿಯಲು ಹೋಗಿದ್ದರು. ಆದರೆ, ಕಳ್ಳ ಪಿಎಸ್ಐ ಅವರ ಸರ್ವಿಸ್ ಪಿಸ್ತೂಲ್ಸಮೇತ ಪರಾರಿಯಾಗಿ ಪೊಲೀಸರಿಗೆ ಆಟವಾಡಿಸಿದ್ದ. ಕೊನೆಗೆ ಎಂಟುವರೆ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಶರಣಾಗಿದ್ದಾನೆ.

ಇಂದು ಕಲಬುರಗಿ ಜಿಲ್ಲೆಯಲ್ಲಿ ಅಕ್ಷರಶ ಪೊಲೀಸರು ಮತ್ತು ಕಳ್ಳನ ನಡುವೆ, ಕಳ್ಳ ಪೊಲೀಸ್ ಆಟ ನಡೆದಿದೆ. ಕೊನೆಗೂ ಕಲಬುರಗಿ ಪೊಲೀಸರು ಆಟದಲ್ಲಿ ಗೆದ್ದಿದ್ದು, ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲಕ ಮೂರು ರಾಜ್ಯದ ಪೊಲೀಸರಿಗೆ ಬೇಕಾಗಿದ್ದ ಖತರ್ನಾಕ ಮನೆಗಳ್ಳನನ್ನು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.

ಇದನ್ನೂ ಓದಿ : ಎಟಿಎಂನಿಂದ 24 ಲಕ್ಷ ದರೋಡೆ, ಆರೋಪಿಗಳ ಬಂಧನ

ಎಂಟುವರೆ ಗಂಟೆಗಳ ಕಾಲ ಕಳ್ಳಾಟ

ಸರಿ ಸುಮಾರು ಎಂಟುವರೆ ಗಂಟೆಗಳ ಕಾಲ ಕಳ್ಳಾಟವಾಡಿ ಪೊಲೀಸರಿಗೆ ಶರಣಾದ ಕಿಲಾಡಿ ಕಳ್ಳನ ಹೆಸರು ಖಾಜಪ್ಪ ಅಂತ. ಮೂಲತ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳ್ಳೂರಗಿ ಗ್ರಾಮದ ನಿವಾಸಿ. ಬಳ್ಳೂರಗಿ ಗ್ರಾಮದವನಾದರೂ ಕೂಡ ಈತ ಇರ್ತಿದ್ದು ಹೆಚ್ಚಾಗಿ ಮಹರಾಷ್ಟ್ರದ ಪುಣೆ, ಅಕ್ಕಲಕೋಟೆ ಸೇರಿದಂತೆ ಅನೇಕ ಭಾಗದಲ್ಲಿಯೇ.

ಆರೋಪಿ ಖಾಜಪ್ಪನ ಮೇಲೆ ಕಲಬುರಗಿ, ಮಹರಾಷ್ಟ್ರ, ತೆಲೆಂಗಾಣದ ವಿವಿಧ ಪೊಲೀಸ್ ಠಾಣೆಗಳಲ್ಲಿ ಬರೋಬ್ಬರಿ 28 ಮನೆಗಳ್ಳತನ ಪ್ರಕರಣಗಳಿವೆ.

RELATED ARTICLES

Related Articles

TRENDING ARTICLES