ಬೆಂಗಳೂರು : ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಿತ್ರಪಕ್ಷಗಳ ಮಹಾಘಟಬಂಧನ್ ಸಭೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಖರ್ಚುವೆಚ್ಚಗಳನ್ನು ವಹಿಸಿಕೊಂಡಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಹೌದು, ಈ ಬಗ್ಗೆ ಪವರ್ ಟಿವಿಗೆ ಮಹತ್ವದ ದಾಖಲೆಗಳು ಸಿಕ್ಕಿವೆ. ಸರ್ಕಾರದ ನಡೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಖಂಡನೆ ವ್ಯಕ್ತಪಡಿಸಿದ್ದು ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. ಇದು ಪವರ್ ಟಿವಿಯ ಮಹಾ ಎಕ್ಸ್‌ಕ್ಲೂಸಿವ್.
ಸದಾ ಜನಪರವಾಗಿ ಧ್ವನಿ ಎತ್ತುತ್ತಿರುವ ನಿಮ್ಮ ಪವರ್ ಟಿವಿ ಇದೀಗ ಸ್ಫೋಟಕ ಸುದ್ದಿಯನ್ನು ಬ್ರೇಕ್ ಮಾಡಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾಘಟಬಂಧನ್ ಖರ್ಚುವೆಚ್ಚವನ್ನೆಲ್ಲಾ ಸರ್ಕಾರವೇ ಭರಿಸಿರುವುದು ಬೆಳಕಿಗೆ ಬಂದಿದೆ. ರಾಜ್ಯದ ಜನಸಾಮಾನ್ಯರ ತೆರಿಗೆ ಹಣ ಖಾಸಗಿ ಸಭೆಗಳಿಗೆ ಬಳಕೆ ಮಾಡಲಾಗಿದೆ. ಅಲ್ಲದೆ, ಭಾರತದ 30ಕ್ಕೂ ಹೆಚ್ಚು ನಾಯಕರ ಆತಿಥ್ಯದ ಹೊಣೆ ಐಎಎಸ್ (IAS) ಆಫೀಸರ್ಸ್ಗೆ ವಹಿಸಲಾಗಿದೆ.
ಹಾಗಾದರೆ, ಯಾವೆಲ್ಲಾ ಮುಖಂಡರ ಆತಿಥ್ಯದ ಜವಾಬ್ದಾರಿಯನ್ನು ಯಾರಿಗೆ ವಹಿಸಲಾಗಿದೆ ಎಂಬುದನ್ನು ನೋಡುವುದಾದರೆ.
ಆತಿಥ್ಯ ಭಾಗ್ಯಕ್ಕೆ ನಿಯೋಜಿತ ತಂಡ!
- ಮಲ್ಲಿಕಾರ್ಜುನ್ ಖರ್ಗೆ, ಎಐಸಿಸಿ ಅಧ್ಯಕ್ಷ : ಅನ್ಬುಕುಮಾರ್, IAS
- ನಿತೀಶ್ ಕುಮಾರ್, ಬಿಹಾರ ಸಿಎಂ : ಕೆ.ಪಿ.ಮೋಹನ್ ರಾಜ್, IAS
- ಎಂ.ಕೆ. ಸ್ಟಾಲಿನ್, ತಮಿಳುನಾಡು ಸಿಎಂ : ರಾಮಚಂದ್ರನ್, IAS
- ಹೇಮಂತ್ ಸೊರೆನ್, ಜಾರ್ಖಂಡ್ ಸಿಎಂ : ರಿಚರ್ಡ್ ವಿನ್ಸೆಂಟ್ ಡಿಸೋಜ, IAS
- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ : ಉಜ್ವಲ್ ಘೋಷ್, IAS
- ಸೋನಿಯಾ ಗಾಂಧಿ, ಕಾಂಗ್ರೆಸ್ ವರಿಷ್ಠೆ : ಶಿಖಾ, IAS
- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ : ಎಂ.ಟಿ. ರೆಜು, IAS
- ಲಾಲೂ ಪ್ರಸಾದ್ ಯಾದವ್, ಬಿಹಾರ ಮಾಜಿ ಸಿಎಂ : ರವಿಶಂಕರ್, IAS
- ತೇಜಸ್ವಿ ಯಾದವ್, ಬಿಹಾರ ಡಿಸಿಎಂ : ತ್ರಿಲೋಕ್ ಚಂದ್ರ, IAS
- ಡಿ.ರಾಜ, ಸಿಪಿಐ ನಾಯಕ : ಕ್ಯಾಪ್ಟನ್ ಕೆ.ರಾಜೇಂದ್ರ, IAS
- ಸೀತಾರಾಂ ಯೆಚೂರಿ ಸಿಪಿಐ ನಾಯಕ : ವಿಶಾಲ್, IAS
- ಶರದ್ ಪವಾರ್, ಎನ್ಸಿಪಿ ವರಿಷ್ಠ : ಶರತ್, IAS
- ಜಿತೇಂದ್ರ ಅವಧ್ : ಮಮತಾ, IAS
- ಅರವಿಂದ್ ಕೇಜ್ರಿವಾಲ್, ದೆಹಲಿ ಸಿಎಂ : ಯಶ್ವಂತ್ ಗುರುಕರ್, IAS
- ಉದ್ಧವ್ ಠಾಕ್ರೆ, ಶಿವಸೇನೆ ವರಿಷ್ಠ : ಹೆಫ್ಸಿಬಾ ರಾಣಿ ಕೊರಳಪತಿ, IAS
- ಅಖಿಲೇಶ್ ಯಾದವ್, ಎಸ್ಪಿ ವರಿಷ್ಠ : ರಾಜೇಶ್ ಗೌಡ, IAS
- ಮೆಹಬೂಬ ಮುಫ್ತಿ, ಜಮ್ಮು-ಕಾಶ್ಮೀರ ಮಾಜಿ ಸಿಎಂ : ಅನೀಸ್ ಕಣ್ಮಣಿ, IAS
ಇನ್ನು ಸರ್ಕಾರದ ನಡೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಖಂಡನೆ ವ್ಯಕ್ತಪಡಿಸಿದ್ದಾರೆ. ಗಣ್ಯರ ಆತಿಥ್ಯ ವಿವಾದವಾಗಬಾರದು ಎಂದು ಸರ್ಕಾರದ ಮಾಸ್ಟರ್ಪ್ಲ್ಯಾನ್ ಮಾಡಿದ್ದು, ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೆಪದಲ್ಲಿ ಆಡಳಿತ ಯಂತ್ರ ಬಳಕೆ ಮಾಡಿಕೊಳ್ಳಲಾಗಿದೆ. ಗೃಹಲಕ್ಷ್ಮೀ ಯೋಜನೆ ಚಾಲನೆ ನೆಪದಲ್ಲಿ ಮಹಾಘಟಬಂಧನ್ ಸಭೆ ಆಯೋಜನೆ ಮಾಡಲಾಗಿದ್ದು, ಸ್ವಾಮಿ ಕಾರ್ಯ ಸ್ವಕಾರ್ಯ ಎರಡನ್ನೂ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ.