Wednesday, January 22, 2025

ಸಿದ್ದರಾಮಯ್ಯ ಗಾಢ ನಿದ್ದೆಯಿಂದ ರೈತರು ಆತ್ಮಹತ್ಯೆ : ಬಿಜೆಪಿ ಕಿಡಿ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಮಾರು 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜ್ಯ ಬಿಜೆಪಿ ಕಿಡಿಕಾರಿದೆ.‌

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಕಳೆದ ಅವಧಿಯಲ್ಲಿ ಸಿದ್ದರಾಮಯ್ಯರವರ ಗಾಢ ನಿದ್ದೆಯಿಂದಾಗಿ ರಾಜ್ಯದಲ್ಲಿ 3,500ಕ್ಕೂ ಹೆಚ್ಚು ರೈತರು ಜೀವ ಕಳೆದುಕೊಂಡಿದ್ದರು ಎಂದು ಕುಟುಕಿದೆ.

ಈ ಬಾರಿಯೂ ಕಾಂಗ್ರೆಸ್‌ ಪಕ್ಷದ ರೈತ ವಿರೋಧಿ ಧೋರಣೆಯಿಂದ ಅದೇ ತಪ್ಪುಗಳು ಮತ್ತೆ ಮರುಕಳಿಸುತ್ತಿವೆ. ಸರ್ಕಾರದ ವೈಫಲ್ಯದಿಂದ ಎರಡೇ ತಿಂಗಳಲ್ಲಿ 42 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನಾದರೂ ರೈತರ ಆತ್ಮಹತ್ಯೆ ತಡೆಯುವತ್ತ ಕೂಡಲೇ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ಸದ್ಬುದ್ಧಿ ಬರಲಿ. ಎಂದು ಚಾಟಿ ಬೀಸಿದೆ.

ಇದನ್ನೂ ಓದಿ : ಬೊಮ್ಮಾಯಿಗೆ ಬಿಗ್ ಆಫರ್ ಕೊಟ್ಟ ಸಚಿವ ಎಂ.ಬಿ ಪಾಟೀಲ್

ಕಲೆಕ್ಷನ್‌ ಒಂದೇ ಚಿಂತೆ

ಮುಂಗಾರು ವಿಳಂಬವಾಗುತ್ತಿದೆ ಎಂಬ ಸೂಚನೆ ಸಿಕ್ಕಿದಾಗ ಕಾಂಗ್ರೆಸ್ ಸರ್ಕಾರ ಲೋಲುಪತೆಯಲ್ಲಿ ಮಲಗಿತ್ತು. ಮಳೆ ಕೊರತೆ ಉಂಟಾಗಿ ಬರದ ಸೂಚನೆ ಸಿಕ್ಕಾಗಲೂ ಎಟಿಎಂ ಸರ್ಕಾರ (ATM Sarkara)ಕ್ಕೆ ಇದ್ದಿದ್ದು ಕಲೆಕ್ಷನ್‌ ಒಂದೇ ಚಿಂತೆ. ಈಗ 100 ತಾಲೂಕುಗಳಿಗೆ ಕುಡಿಯುವ ನೀರೂ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳ ಪಾಲಿಗೆ ಶುದ್ಧತೆಯ ಭಾಗ್ಯವೇ ಇಲ್ಲ ಎಂದು ಆಕ್ರೋಶ ಹೊರಹಾಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ನಿಮ್ಮ ಕಲೆಕ್ಷನ್‌ ವ್ಯವಹಾರಗಳನ್ನು ಕೆಲವು ದಿನಗಳ ಮಟ್ಟಿಗಾದರೂ ನಿಲ್ಲಿಸಿ. ಜನರ ಕಷ್ಟಗಳಿಗೆ ಸ್ಪಂದಿಸುವತ್ತ ಗಮನಹರಿಸಿ ಎಂದು ಬಿಜೆಪಿ ಕಾಲೆಳೆದಿದೆ.

RELATED ARTICLES

Related Articles

TRENDING ARTICLES