Wednesday, January 22, 2025

ಕಾಪಿ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿ, ಮನನೊಂದು ಆತ್ಮಹತ್ಯೆಗೆ ಶರಣು!

ಬೆಂಗಳೂರು : ಬಿ ಟೆಕ್ ವಿದ್ಯಾರ್ಥಿಯೊಬ್ಬ ಕಾಲೇಜಿನ 8ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಾಲೇಜ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ, 8ನೇ ಮಹಡಿಯಿಂದ ಬಿದ್ದು ಸೂಸೈಡ್! ಕಾರಣವೇನು ಗೊತ್ತಾ?

ನಗರದ ಹೊಸಕೆರೆಹಳ್ಳಿ ಬಳಿ ಇರುವ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಆದಿತ್ಯ ಪ್ರಭು(19) ಮೃತಪಟ್ಟ ವಿದ್ಯಾರ್ಥಿ. ಈತನು ಮೂಲತಃ ಮಂಗಳೂರಿನವನು ಎಂದು ತಿಳಿದುಬಂದಿದೆ.

ಆದಿತ್ಯ ಪ್ರಭು ಕಾಲೇಜಿನಲ್ಲಿ ಬಿ ಟೆಕ್ ವಿಭಾಗದಲ್ಲಿ ಸೆಕೆಂಡ್ ಸೆಮಿಸ್ಟರ್ ಓದುತ್ತಿದ್ದ. ಇಂದು ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿತ್ತು. ಎಕ್ಸಾಂ ನಡೆಯುತಿದ್ದ ವೇಳೆ ಮೊಬೈಲ್ ಬಳಸುತಿದ್ದ. ಈ ವೇಳೆ ಕಾಪಿ ಒಡೆಯುತ್ತಿದ್ದ ಅನ್ನೋ ಆರೋಪ‌ವಿದೆ.

ಇದನ್ನೂ ಓದಿ :ಸ್ವಾಮೀಜಿಗಳು ಗೋವು ಸಾಕಿದ್ದೀರಾ? ಸೆಗಣಿ, ಉಚ್ಚಿ ತೆಗೆದಿದ್ದಾರಾ? : ಪಾಟೀಲ್ ಗಣಿಹಾರ

ಪ್ರಾಧ್ಯಾಪಕರು ಆದಿತ್ಯ ಪ್ರಭು ಮೊಬೈಲ್ ಅನ್ನು ಪಡೆದಿದ್ದರು. ಅಲ್ಲದೆ, ಕಾಪಿ ಹೊಡೆದು ಸಿಕ್ಕಿಬಿದ್ದ ವಿಷಯವನ್ನು ಪೋಷಕರಿಗೆ ಹೇಳಿದ್ದರು. ಇದರಿಂದ ಆದಿತ್ಯಪ್ರಭು ಮನನೊಂದಿದ್ದಾನೆ. ಕಾಪಿ ಹೊಡೆದು ಸಿಕ್ಕಿಬಿದ್ದ ವಿಚಾರ ಎಲ್ಲರಿಗೂ ತಿಳಿದರೆ ಮರ್ಯಾದೆ ಹೋಗುತ್ತದೆ ಎಂದು ಆತ್ಮಹತ್ಯೆಗೆ ಶರಣಾಗಿದ್ದಾನೆ

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗಿರಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿಇಎಸ್​ ಕಾಲೇಜಿನಲ್ಲಿ ವಿದ್ಯಾರ್ಥಿ ಸಾವಿಗೆ ಶರಣಾಗಿದ್ದಾನೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ದಕ್ಷಿಣ ವಲಯದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES