Sunday, December 22, 2024

ವಿಧಾನಸೌಧ ನಿಮ್ಮ ಅಪ್ಪನ ಮನೆಯ ಆಸ್ತಿಯಲ್ಲ : ಗಂಗಾಧರ ಕುಲಕರ್ಣಿ ಕಿಡಿ

ದಾವಣಗೆರೆ : ಎಂ.ಬಿ ಫಾರೂಕ್ ಅವರೇ, ವಿಧಾನಸೌಧ ನಿಮ್ಮ ಅಪ್ಪನ ಮನೆಯ ಆಸ್ತಿಯಲ್ಲ ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಕಿಡಿಕಾರಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಾರೂಕ್ ಅವರೇ, ವಿಧಾನಸೌಧ ಮೆಕ್ಕಾ-ಮದೀನವಲ್ಲ ಎಂದು ಗುಡುಗಿದ್ದಾರೆ.

ಜೆಡಿಎಸ್ ಶಾಸಕ ಎಂ.ಬಿ ಫಾರೂಕ್ ನಾಮಜ್ ಗೆ ಅವಕಾಶ ಕೇಳಿದ್ದಾರೆ. ವಿಧಾನಸೌಧದಲ್ಲಿ ನಮಾಜಿಗೆ ಕೊಠಡಿ ಕೊಡಿ ಎಂದಿದ್ದಾರೆ. ಅಕಸ್ಮಾತ್ ನಮಾಜ್ ಗೆ ಅವಕಾಶ ಕೊಟ್ಟರೆ, ನಾವು ವಿಧಾನಸಭೆಗೆ ನುಗ್ಗಿ ಹನುಮಾನ್ ಚಾಲೀಸ್ ಹೇಳ್ತಿವಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ವಿಧಾನಸೌಧದ ದಕ್ಷಿಣ ದ್ವಾರ ಓಪನ್ : ಅದೇ ಬಾಗಿಲಿನಿಂದ ಸಿಎಂ ಎಂಟ್ರಿ ಅಂಡ್ ಎಕ್ಸಿಟ್

ಅಟ್ಟಾಡಿಸಿ ಹೊಡೆಯಬೇಕಾಗುತ್ತದೆ

ಶರಿಯಾ ದೇಶದ ಕಾನೂನು ಬೇಕಂದರೆ ಆ ದೇಶಕ್ಕೆ ಹೋಗಿ. ಬಾಯಿ ಮುಚ್ಕೊಂಡು ಕಾನೂನು ಒಪ್ಪಿಕೊಳ್ಳಬೇಕು. ವಿರೋಧಿ ಧ್ವನಿಗಳಿಗೆ ಸೊಪ್ಪು ಹಾಕದೇ ಜಾರಿ ಮಾಡಲಿ. ಶರಿಯಾ ಕಾನೂನು ಬೇಕು ಎಂದರೆ ಕ್ರಿಮಿನಲ್ ಗೆ ಒಪ್ಪಿಗೆ ಇದೆಯಾ? ಶರಿಯಾ ಕಾನೂನು ಬೇಕಂದರೆ ಅಟ್ಟಾಡಿಸಿ ಹೊಡೆಯಬೇಕಾಗುತ್ತದೆ. ನುಗ್ಗಿ ಧ್ವಂಸ ಮಾಡಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದರು.

ಐದು ಲಕ್ಷ ಸಹಿ ಸಂಗ್ರಹ ಮಾಡ್ತೇವೆ

ಏಕರೂಪ ನಾಗರಿಕ ಕಾನೂನು ಜಾರಿಗೆ ಅಭಿಯಾನ ವಿಚಾರವಾಗಿ ಮಾತನಾಡಿ, ಶ್ರೀರಾಮಸೇನೆಯಿಂದ ಐದು ಲಕ್ಷ ಸಹಿ ಸಂಗ್ರಹ ಮಾಡಲಾಗುವುದು. ಜುಲೈ 18ರಿಂದ 28ರವರೆಗೆ ಅಭಿಯಾನ ನಡೆಯಲಿದೆ. ಸಹಿ ಸಂಗ್ರಹಗಳನ್ನು ಪ್ರಧಾನಿಗೆ ಕಳುಹಿಸಲಾಗುವುದು. ದೇಶ ಹೊಡೆಯುವ ಮಾನಸಿಕತೆ ಇದೆ. ಭದ್ರತೆ, ಐಕ್ಯತೆ ದೃಷ್ಠಿಯಿಂದ ಕಾನೂನು ಜಾರಿಯಾಗಲಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES