Sunday, January 19, 2025

ಸ್ವಾವಲಂಬಿ ಬದುಕಿನೊಂದಿಗೆ ಮಾದರಿಯಾದ ಮಂಗಳಮುಖಿ

ಬಾಗಲಕೋಟೆ : ಮಂಗಳಮುಖಿ ಅಂದ್ರೆ ಸಾಕು ಮನುಷ್ಯರ ದೃಷ್ಟಿಕೋನ ಇರೋದೆ ಬೇರೆ. ಹೀಗಿರುವಾಗ ಬಾಗಲಕೋಟೆಯ ಮಂಗಳಮುಖಿಯೊಬ್ಬರು ಸ್ವಂತ ವ್ಯಾಪಾರ ವಹಿವಾಟು ನಡೆಸುವ ಮೂಲಕ ಸ್ವಾವಲಂಬಿ ಜೀವನ ಕಂಡು ಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಹೌದು, ಹೀಗೆ ತರಕಾರಿ ಅಂಗಡಿ ಇಟ್ಟು ವ್ಯಾಪಾರ ಮಾಡ್ತಿರೋ ಇವರ ಹೆಸರು ಸನಮ್ ಹಾಜಿ. ಮಂಗಳಮುಖಿಯಾಗಿರೋ ಸನಮ್ ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದು ಸ್ವಾವಲಂಭಿ ಜೀನವ ಸಾಗಿಸುತ್ತಿದ್ದಾರೆ.

ಮೊದಲೇ ಮಂಗಳಮುಖಿಯರು ಎಂದರೇ ಸಮಾಜದಲ್ಲಿ ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತೆ. ಇಂತಹ ಸಂದರ್ಭದಲ್ಲಿ ಸನಮ್ ಎಲ್ಲ ಮಂಗಳಮುಖಿಯರಿಗೆ ಮಾದರಿಯಾಗುವ ರೀತಿಯಲ್ಲಿ ಜೀನವ ಸಾಗಿಸುತ್ತಿದ್ದಾರೆ. ಜೀನನೋಪಾಯಕ್ಕೊಂದು ಪುಟ್ಟ ತರಕಾರಿ ಅಂಗಡಿ ಇಟ್ಟುಕೊಂಡು, ತಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದ್ದಾರೆ.

ಹೆಣ್ಣಿನ ಹಾವಬಾವ ಮಾಡುತ್ತಿದ್ದರಿಂದ ಮನೆಯವ್ರಿಂದಲೂ ತಿರಸ್ಕೃತಗೊಂಡು ಊರು ಬಿಟ್ಟಿದ್ದ ಸನಮ್ ಸದ್ಯ ತಮ್ಮೂರಲ್ಲೇ ತರಕಾರಿ ಅಂಗಡಿ ಇಟ್ಟುಕೊಂಡು ಸ್ವಾಭಿಮಾನದ ಜೀವನ ನಡೆಸಿದ್ದಾರೆ. ಸನಮ್ ಹಾಜಿಗೆ ಸದ್ಯ 21 ವರ್ಷ. ಇವರು 12 ನೇ ವಯಸ್ಸಿನಲ್ಲೇ ಮನೆ ಬಿಟ್ಟು ಬೆಂಗಳೂರು ಸೇರಿದ್ದ ಸಲೀಮ್ ಆ ನಂತರ್ ಆಗಿದ್ದು ಸನಮ್ ಅಂತ.

ಇದನ್ನೂ ಓದಿ : ತಂಗಿಯ ಬರ್ತ್​​​ಡೇಗೆ ಟೊಮ್ಯಾಟೋ ಗಿಫ್ಟ್​​​​..! : ಕಾಸ್ಟ್ಲಿಗಿಫ್ಟ್​ ಪಡೆದ ಬರ್ತ್​​​ಡೇ ಗರ್ಲ್​​ ಹೇಳಿದ್ದೇನು?

ಮುಂಬೈಗೆ ಹೋಗಿ ಲಿಂಗ ಪರಿವರ್ತನೆ

ಸನಮ್ ಹಾಜಿ ಮೊದಲು ಹುಡುಗನಾಗಿದ್ದ, 12 ವಯಸ್ಸಿನಲ್ಲಿ ಹುಡುಗಿಯ ರೀತಿ ಹಾವ ಭಾವ ಮಾಡಲು ಆರಂಭಿಸಿದ್ದರಿಂದ ಮನೆಯವರಿಂದ ನಿಂದನೆಗೆ ಒಳಗಾಗಿದ್ದರು. ಸಂಬಂಧಿಕರಿಂದ ಅವಮಾನಕ್ಕೆ ಒಳಗಾಗಿ ಬೆಂಗಳೂರು ನಂತರ ಮುಂಬೈಗೆ ಹೋಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಸೆಕ್ಸ್ ವರ್ಕ್, ಭಿಕ್ಷಾಟಣೆ ಯಂತಹ ಕೆಲಸಗಳಲ್ಲಿ ತೊಡಗಿದ್ದರು.

ಇಡೀ ಕುಟುಂಬಕ್ಕೆ ಸನಮ್ ಆಧಾರ

ಬಳಿಕ 8 ತಿಂಗಳಿಂದ ಈಚೆಗೆ ಬಾಗಲಕೋಟೆಯಲ್ಲಿ ವಾಸವಾಗಿರೋ ಸನಮ್, ಮಿಲನ ಸಂಸ್ಥೆಯಿಂದ ಸಾಲ ಸೌಲಭ್ಯ ಪಡೆದು ತರಕಾರಿ ಅಂಗಡಿ ನಡೆಸುತ್ತಿದ್ದಾರೆ. ಮೊದ ಮೊದಲು ಮನೆಯವರಿಂದಲೇ ನಿಂದನೆಗೆ ಒಳಗಾಗಿ ಮನೆ ಬಿಟ್ಟಿದ್ದ ಸನಮ್ ಗೆ ತಂದೆ-ತಾಯಿ ಇಲ್ಲ. ಸದ್ಯ ಅಜ್ಜಿ ಜೊತೆಗೆ ಜೀವನ ನಡೆಸಿದ್ದು, ಚಿಕ್ಕಮ್ಮ ಜೊತೆಗೆ ತರಕಾರಿ ಅಂಗಡಿ ನಡೆಸುತ್ತಿದ್ದು ಇಡೀ ಕುಟುಂಬಕ್ಕೆ ಆಧಾರವಾಗಿದ್ದಾರೆ.

RELATED ARTICLES

Related Articles

TRENDING ARTICLES